ಡ್ರಗ್ ಖರೀದಿಗೆ ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲಿ ನರ್ಸ್​ ದುರಂತ ಅಂತ್ಯ? Drug Addict

ಡ್ರಗ್ ಖರೀದಿಗೆ ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲಿ ನರ್ಸ್​ ದುರಂತ ಅಂತ್ಯ? Drug Addict
ಡ್ರಗ್ ಖರೀದಿಗೆ ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲಿ ನರ್ಸ್​ ದುರಂತ ಅಂತ್ಯ? Drug Addict
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀತಿಸಿ ಮದುವೆಯಾದ ಐದೇ ತಿಂಗಳಿಗೆ ಕೊಲೆಯಾದ ನರ್ಸ್
  • 23 ವರ್ಷದ ಪತ್ನಿಯನ್ನು ಕೊಂದ ಲ್ಯಾಬ್​ ಟೆಕ್ನಿಷಿಯನ್​ ಜೈಲು ಪಾಲು
  • ಮದುವೆಯಾದ ಕೆಲವೇ ದಿನಕ್ಕೆ ಪತಿ ಹೆರಾಯಿನ್​ ವ್ಯಸನಿ ಎಂದು ತಿಳಿದು ಕಂಗಾಲು
ಗುರುಗ್ರಾಮ: 23 ವರ್ಷದ ಗೃಹಿಣಿಯೊಬ್ಬರು ತಮ್ಮ ಡ್ರಗ್​ ಅಡಿಕ್ಟೆಡ್ ( Drug Addict )​ ಗಂಡನಿಂದಲೇ ಕೊಲೆಯಾದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಕಾಜಲ್ ಎಂದು ಗುರುತಿಸಲಾಗಿದ್ದು, ಆಕೆಯ ಆರೋಪಿ ಪತಿ ಅರುಣ್ ಶರ್ಮಾನನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.
ಕಾಜಲ್​ ಪೋಷಕರು ಗುರುಗ್ರಾಮದ ಪೊಲೀಸರಿಗೆ ದೂರು ನೀಡಿದ ಆಧಾರದ ಮೇಲೆ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಈ ವೇಳೆ ಆಕೆ ಮೂಗಿನಲ್ಲಿ ರಕ್ತ ಕಾರಿಕೊಂಡು ಬಿದ್ದಿದ್ದರು. ಅಗತ್ಯಕ್ಕಿಂತ ಹೆಚ್ಚಿನಷ್ಟು ಅರವಳಿಕೆ ಕೊಟ್ಟು ಆತ ಪರಾರಿಯಾಗಿದ್ದ ಎನ್ನುವುದು ಮರಣೋತ್ತರ ಪರೀಕ್ಷೆಗಳಿಂದ ತಿಳಿದುಬಂದಿದೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ತನಿಖೆಯ ಮೂಲಗಳ ಪ್ರಕಾರ ಗಾಜಿಯಾಬಾದ್‌ನ ಲೋನಿ ನಿವಾಸಿಯಾದ ಅರುಣ್​ ಶರ್ಮಾ ಖಾಸಗಿ ಆಸ್ಪತ್ರೆಯ ಲ್ಯಾಬರೋಟರಿಯಲ್ಲಿ ಟೆಕ್ನಿಶಿಯನ್​ ಆಗಿ ಕೆಲಸ ಮಾಡುತ್ತಿದ್ದ. ಕಾಜಲ್​ ಸಹ ಅಲ್ಲಿ ನರ್ಸ್​ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹದ ಸಲುಗೆಯಿತ್ತು. ಕಾಲ ಕ್ರಮೇಣ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರು ಎರಡು ವರ್ಷ ಪ್ರೀತಿಸಿದ್ದರು ನಂತರ ಮದುವೆಯಾಗಲು ನಿರ್ಧರಿಸಿದರು.

ಡ್ರಗ್​ ಅಡಿಕ್ಟ್​ನ ಮದುವೆಯಾಗಿ ನರಕ ಯಾತನೆ

2025 ನವೆಂಬರ್​ನಲ್ಲಿ ಕಾಜಲ್​ ಮತ್ತು ಅರುಣ್​ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಸುಖ ಸಂಸಾರದ ಕನಸ್ಸನ್ನು ಹೊತ್ತಿದ್ದ ಕಾಜಲ್​ಗೆ ಆಘಾತಕಾರಿ ವಿಚಾರವೊಂದು ತಿಳಿದುಬಂದಿತ್ತು. ಆತ ಉದ್ಯೋಗಕ್ಕೆ ಗುಡ್​ಬೈ ಹೇಳಿ ಮನೆಯಲ್ಲಿ ಕೂತ. ಜೊತೆಗೆ ಆತನೊಬ್ಬ ಡ್ರಗ್​ ಅಡಿಕ್ಟ್​ ಎನ್ನುವುದು ತಿಳಿಯಿತು. ಹೆರಾಯಿನ್​ ವ್ಯಸನ ಹೊಂದಿದ್ದಾನೆ ಎನ್ನುವುದು ಪತ್ತೆ ಹಚ್ಚಿದ್ದಳು. ಜೊತೆಗೆ ಆತ ಆಕೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಆತನ ಕಾಟಕ್ಕೆ ಬೇಸತ್ತು ಕಾಜಲ್​ ತವರು ಮನೆ ಸೇರಿದ್ದಳು. ಅಲ್ಲಿಗೂ ಬಂದ ಆತ ಡ್ರಗ್ ಖರೀದಿಗೆ ಹಣ ಕೇಳಿದ್ದನು. ಆಕೆ ಕೊಡಲು ನಿರಾಕರಿಸಿದ ಕಾರಣ ಆಕೆಯ ಎಡಗೈಗೆ ಅರವಳಿಕೆ ಚುಚ್ಚಿ ಹಣ ಕದ್ದದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕೊಲೆಗೆ ಸಂಬಂಧಿಸಿದ ವಸ್ತುಗಳಾದ ಇಂಜೆಕ್ಷನ್​, ಸಿರಿಂಜ್, ಚುಚ್ಚುಮದ್ದು ಹಾಗೂ ಅರವಳಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರವಳಿಕೆ ಕೊಟ್ಟಿದ್ದೇ ಆಕೆಯ ಸಾವಿಗೆ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಅಲ್ಲದೆ ಅರುಣ್​ ಶರ್ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ಸಹ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ರೋಗಿ ಪತ್ನಿ ಎಂದು ಕೊಂದಿದ್ದ ಮಹೇಂದ್ರ

ಬೆಂಗಳೂರಿನಲ್ಲಿ ಚರ್ಮದ ವೈದ್ಯೆ ಕೃತಿಕಾ ರೆಡ್ಡಿಯನ್ನು ಪತಿ ಮಹೇಂದ್ರ ಕೊಲೆ ಮಾಡಿದ್ದ. ಆಕೆ ರೋಗಿ ಎಂದು ತಿಳಿದಿದ್ದರೂ ಆಕೆಯ ಕುಟುಂಬ ತನ್ನೊಂದಿಗೆ ಮದುವೆ ಮಾಡಿದ್ದಾರೆ ಎಂದು ಸಿಟ್ಟಾಗಿ ಹೆಚ್ಚು ಅರವಳಿಕೆ ಕೊಟ್ಟು ಕೊಲೆ ಮಾಡಿದ್ದ. ನಂತರ ಆಕೆಯ ಆಸ್ತಿಗಾಗಿ ಪೋಷಕರ ಬಳಿ ಇದೊಂದು ನೈಸರ್ಗಿಕ ಸಾವು ಎಂದು ನಾಟಕವಾಡಿದ್ದ ಘಟನೆ ಬೆಳಕಿಗೆಬಂದಿತ್ತು. ವೈದ್ಯಕೀಯ ಲೋಕದಲ್ಲೇ ಇಂತಹ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಸದ್ಯ ಸಾಮಾನ್ಯ ಜನರಲ್ಲಿ ಆತಂಕವನ್ನುಂಟು ಮಾಡುವಂತೆ ಮಾಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net