ಡಾಕ್ಟರ್ ಇಲ್ಲ ಅಂತ ಡಾಕ್ಟರ್ ಆದ ಡ್ರೈವರ್‌! ರೋಗಿಗಳಿಗೆ ಪ್ರಿಸ್ಕ್ರಿಪ್ಷನ್ ಬರೆದ ಚಾಲಕ | Driver Became a Doctor

ವೈದ್ಯರ ಬದಲು ರೋಗಿಗಳಿಗೆ ಔಷಧ ನೀಡಿದ ಚಾಲಕ
ವೈದ್ಯರ ಬದಲು ರೋಗಿಗಳಿಗೆ ಔಷಧ ನೀಡಿದ ಚಾಲಕ
Published on: 

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆಯಲ್ಲಿ ವೈದ್ಯರಿಲ್ಲದಾಗ ರೋಗಿಗಳನ್ನು ವಿಚಾರಿಸಿದ ಚಾಲಕ
  • ಬಳಿಕ ರೋಗಿಗಳಿಗೆ ಔಷಧಿಗಳ ಪ್ರಿಸ್ಕ್ರಿಪ್ಷನ್ ಬರೆದ ಆರೋಪ
  • ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Driver Became a Doctor: ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದ ವೇಳೆ ಅವರ ಚಾಲಕನೇ ರೋಗಿಗಳನ್ನು ವಿಚಾರಿಸಿ, ಆರೋಗ್ಯ ಸಮಸ್ಯೆ ಕೇಳಿ ಔಷಧಿ ಪ್ರಿಸ್ಕ್ರಿಪ್ಷನ್ ಬರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಕಾನ್ಶಿರಾಮ್ ಕಂಬೈನ್ಡ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಕಲ್ ಆಫೀಸರ್ ರಾಮ್‌ಕೇಶ್ ಅವರು ಕೋರ್ಟ್ ಕೆಲಸಕ್ಕಾಗಿ ಹೊರಗಿದ್ದ ವೇಳೆ, ದೇವ್ ಎಂಬ ವ್ಯಕ್ತಿ ಒಪಿಡಿಯಲ್ಲಿ ರೋಗಿಗಳನ್ನು ಕರೆದು ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಚಾರಿಸಿದ್ದಾನೆ ಎನ್ನಲಾಗಿದೆ.
ರೋಗಿಗಳಿಗೆ ಔಷಧಿ ಬರೆದ ಚಾಲಕ
ಬಳಿಕ ಕೆಲ ರೋಗಿಗಳಿಗೆ ಔಷಧಿ ಚೀಟಿ ಬರೆದು, ಆಸ್ಪತ್ರೆ ಹೊರಗಿನ ಮೆಡಿಕಲ್ ಶಾಪ್‌ನಲ್ಲಿ ಔಷಧಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಸಂಬಂಧಪಟ್ಟ ವೈದ್ಯರಿಂದ ಸ್ಪಷ್ಟನೆ ಕೇಳಿದೆ. ಪ್ರಕರಣದ ತನಿಖೆ ಬಳಿಕ ನಿಯಮ ಉಲ್ಲಂಘನೆ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಶಿಸ್ತು ಕ್ರಮ, ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ರೋಗಿಗಳ ಸುರಕ್ಷತೆ ಬಗ್ಗೆ ಪ್ರಶ್ನೆ

ಈ ಘಟನೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸುರಕ್ಷತೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾಣವಾಗಿದೆ. (ಏಜೆನ್ಸೀಸ್)