ಬಸ್​ ಓಡಿಸುವಾಗಲೇ ಚಾಲಕನಿಗೆ ಪಿಟ್ಸ್​;​ ಪಲ್ಟಿಯಾಗಿ ಏಳು ಪ್ರಯಾಣಿಕರಿಗೆ ಗಂಭೀರ ಗಾಯ | Bus Accident

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಬಸ್​ವೊಂದು ಪಲ್ಟಿಯಾಗಿ ಭಾರಿ ಅಪಘಾತ ಸಂಭವಿಸಿದ್ದು, ಬಸ್​ನಲ್ಲಿ 78 ಪ್ರಯಾಣಿಕರ ಪೈಕಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೋಮವಾರ(ಜ. 19) ವರದಿಯಾಗಿದೆ.
ಬಸ್​ ಚಾಲನೆ ಮಾಡುವಾಗಲೇ ಚಾಲಕ ಚಾಲಕ ಅಪ್ಪಲಗುರು ಪಿಟ್ಸ್ ಬಂದಿದ್ದು, ಪ್ರಜ್ಞಾಹೀನತೆಯಿಂದಾಗಿ ಬಸ್ ರಸ್ತೆ ಬದಿ ಪಲ್ಟಿಯಾಗಿದೆ. ಬಸ್​ನಲ್ಲಿದ್ದ ಏಳು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡರೆ, 78 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳು ಪ್ರಯಾಣಿಕರು ಮತ್ತು ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net