ದೋಸ್ತ್ ದೋಸ್ತ್ ನಾ ರಹಾ..: ಟ್ರಂಪ್ ಎಚ್ಚರಿಕೆಗೆ ಕಾಂಗ್ರೆಸ್ ಕಿಡಿ; ಮೋದಿ ವಿದೇಶಾಂಗ ನೀತಿ ಫೇಲ್ ಎಂದ ವಿಪಕ್ಷ | PM Modi

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ನವದೆಹಲಿ: ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಬೆದರಿಕೆಯ ನಂತರ, ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯ(PM Modi) ಟ್ರಂಪ್​ರನ್ನು ಅಪ್ಪಿಕೊಳ್ಳುವ ರಾಜತಾಂತ್ರಿಕತೆಯ ವಿರುದ್ಧ ತೀವ್ರ ವಾಗ್ದಾಳಿ ನೆಡೆಸಿದೆ.
ಈ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ಮೋದಿಯು ಟ್ರಂಪ್​ರನ್ನು ಅಪ್ಪಿಕೊಳ್ಳುವ ರಾಜತಾಂತ್ರಿಕತೆಯನ್ನು ಅಪಹಾಸ್ಯ ಮಾಡಿದ್ದಾರೆ. ಮೋದಿಯ ಹಲವು ವರ್ಷಗಳ ವೈಯಕ್ತಿಕ ಬಾಂಧವ್ಯ ಮತ್ತು ಹೌಡಿ ಮೋದಿ ನಂತಹ ಉನ್ನತ ಮಟ್ಟದ ಕಾರ್ಯಕ್ರಮಗಳು ಪ್ರಸ್ತುತ ಅಮೆರಿಕದ ಆಡಳಿತದಲ್ಲಿ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಕಿಡಿಕಾರಿದ್ದಾರೆ.

ಹಗ್ಸ್​ vs ಹಾರ್ಡ್‌ಬಾಲ್ ಕಾಂಗ್ರೆಸ್ ವ್ಯಂಗ್ಯ

ಮೋದಿ ಮತ್ತು ಟ್ರಂಪ್​ ಅದ್ದೂರಿ ಪ್ರದರ್ಶನಗಳು ಮತ್ತು ನಾಟಕೀಯ ಅಪ್ಪುಗೆಗಳು ಸ್ಥಿರವಾದ ವ್ಯಾಪಾರ ನೀತಿಯಾಗಿ ಪರಿವರ್ತನೆಯಾಗಿಲ್ಲ. 2019 ರಲ್ಲಿ ಹೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಱಲಿ ಮತ್ತು 2020 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದ ಹೊರತಾಗಿಯೂ, ಅಮೆರಿಕವು ಭಾರತವನ್ನು ಕಾರ್ಯತಂತ್ರದ ಪಾಲುದಾರನ ಬದಲು ವ್ಯಾಪಾರ ವಿರೋಧಿ ಎಂದು ಪರಿಗಣಿಸುತ್ತಿದೆ ಎಂದು ರಮೇಶ್​ ತೀವ್ರವಾಗಿ ಕುಟುಕಿದ್ದಾರೆ.
ಕೇಂದ್ರ ಸರ್ಕಾರದ ಕುತಂತ್ರಿ ರಾಜತಾಂತ್ರಿಕತೆಯು ಭಾರತೀಯ ರಫ್ತುದಾರರನ್ನು ವಿಶೇಷವಾಗಿ ಐಟಿ, ಔಷಧ ಮತ್ತು ಜವಳಿ ವಲಯಗಳನ್ನು ಅಮೆರಿಕಾ ಮೊದಲು ನಿಯಮವು ಗುರಿಯಾಗಿಸಿದೆ ಎಂದು ರಮೇಶ್​ ಕಿಡಿಕಾರಿದ್ದಾರೆ.

ಟ್ರಂಪ್​ ಹೇಳಿದ್ದೇನು..?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನಿಜುವೆಲಾ ಅಧ್ಯಕ್ಷ ಮಡುರೊ ಕುರಿತು ಮುಂದಿನ ಕ್ರಮಗಳ ಬಗ್ಗೆ ಮಾತನಾಡುತ್ತಾ, ಭಾರತ ಮತ್ತು ಪ್ರಧಾನಿ ಮೋದಿ ಕುರಿತು ಮಾತನಾಡಿದ್ದು, ನಾನು ಸಂತೋಷವಾಗಿಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಪ್ರಧಾನಿ ಮೋದಿ ಒಳ್ಳೆಯ ವ್ಯಕ್ತಿ ಎಂದು ಹೊಗಳುತ್ತಲೇ ದೇಶದ ಉತ್ಪನ್ನಗಳ ಮೇಲೆ ಸುಂಕ ವಿಧಿಸುವ ಎಚ್ಚರಿಕೆ ಇದೆ.
ಈ ಕುರಿತು ಟ್ರಂಪ್ ಪ್ರಧಾನ ಕಚೇರಿ ವೈಟ್ ಹೌಸ್ ಆಡಿಯೋ ಬಿಡುಗಡೆ ಮಾಡಿದ್ದು, ಭಾರತವು ರಷ್ಯಾದ ತೈಲ ಖರೀದಿಯನ್ನು ಕಡಿಮೆ ಮಾಡಿದೆ. ನನ್ನನ್ನು ಮೆಚ್ಚಿಸಲು ಅವರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನಾನು ಸಂತೋಷವಾಗಿರುತ್ತೇನೆ ಅನ್ನುವುದು ಅವರಿಗೆ ತಿಳಿದಿತ್ತು. ಮೋದಿ ಪ್ರಧಾನಿ ತುಂಬಾ ಒಳ್ಳೆಯ ವ್ಯಕ್ತಿ. ನನ್ನನ್ನು ಸಂತೋಷಪಡಿಸುವುದು ಬಹಳ ಮುಖ್ಯ. ಅವರೊಂದಿಗೆ ವ್ಯವಹಾರ ಮುಂದುವರಿಸಿದರೆ. ನಾವು ಬೇಗನೆ ಸುಂಕವನ್ನು ಹೆಚ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಟ್ರಂಪ್, ರಷ್ಯಾದ ಆರ್ಥಿಕತೆ ಚೆನ್ನಾಗಿಲ್ಲ. ವೆನಿಜುವೆಲಾದ ಆರ್ಥಿಕತೆ ನಾನು ಕಂಡಂತೆ ಇದು ಅತ್ಯಂತ ಕೆಟ್ಟ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಅಮೆರಿಕ ಈ ಹಿಂದೆ ಭಾರತದ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದೆ. ಇದರಲ್ಲಿ ಶೇ. 25ರಷ್ಟು ಸುಂಕವನ್ನು ರಷ್ಯಾದಿಂದ ತೈಲ ಖರೀದಿಸಿದ ಹಿನ್ನೆಲೆ ವಿಧಿಸಲಾಗಿದೆ. ಇನ್ನೂ ಅಮೆರಿಕಾ ಅತಿ ಹೆಚ್ಚು ಸುಂಕ ವಿಧಿಸಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಎರಡೂ ದೇಶಗಳ ನಡುವೆ ಸಂಬಂಧ ಹದಗೆಡದಂತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ನೋಡುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net