ಇದಕ್ಕೂ ಮುನ್ನ, ಎನ್‌ಸಿಪಿ (ಎಸ್‌ಪಿ) ಶಾಸಕ ಹಾಗೂ ಶರದ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್, ಅಜಿತ್ ಪವಾರ್ ಸಾವು ಒಂದು ಸಂಚು ಎಂದು ಆರೋಪಿಸಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಇನ್ನೊಂದೆಡೆ, ಅಜಿತ್ ಪವಾರ್ ಅವರ ಪುತ್ರ ಜಯ್ ಪವಾರ್ ಕೂಡ ಈ ವಿಮಾನ ಅಪಘಾತದ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಸ್ವತಃ ಸುನೇತ್ರಾ ಪವಾರ್ ಅವರೂ ಕೂಡ ಘಟನೆಯ ಸಿಬಿಐ (CBI) ತನಿಖೆಗೆ ಒತ್ತಾಯಿಸಿದ್ದರು.