ದಕ್ಷಿಣ ಕೊರಿಯಾ: ನಾವು ಸಾರ್ವಜನಿಕ ಸ್ಥಳಗಳಾದ ಪಾರ್ಕ್, ಕೆಫೆ ಅಥವಾ ಬಸ್ ನಿಲ್ದಾಣಗಳಿಗೆ ಹೋದಾಗ ನಮ್ಮ ಮೊಬೈಲ್ ಫೋನ್, ಬ್ಯಾಗ್ ಅಥವಾ ಸೈಕಲ್‌ಗಳ ಬಗ್ಗೆ ಎಷ್ಟು ಜಾಗರೂಕರಾಗಿರುತ್ತೇವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಒಂದು ಕ್ಷಣ ಕಣ್ಣು ತಪ್ಪಿದರೂ ವಸ್ತುಗಳು ಮಾಯವಾಗುವ ಈ ಕಾಲದಲ್ಲಿ, ಯಾವುದೇ ಲಾಕ್ ಇಲ್ಲದೆ ಬೆಲೆಬಾಳುವ ವಸ್ತುಗಳನ್ನು ರಸ್ತೆಯಲ್ಲೇ ಬಿಟ್ಟು ಹೋದರೂ ಯಾರೂ ಮುಟ್ಟದ ದೇಶವೊಂದಿದೆ ಎಂದರೆ ನೀವು ನಂಬುತ್ತೀರಾ? ಹೌದು,(South Korea Safety) ಇಂತಹದೊಂದು ಅಚ್ಚರಿಯ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.