ಮೋದಿ ವಿರೋಧಿಸೋ ನೆಪದಲ್ಲಿ ದೇಶಕ್ಕೆ ಅವಮಾನ ಮಾಡಬೇಡಿ: ಧ್ರುವ್ ರಾಠಿಗೆ ಚಳಿ ಬಿಡಿಸಿದ ನಟಿ ಗುಲ್ ಪನಾಗ್! Gul Panag on Dhruv Rathee

ಮೋದಿಯನ್ನು ವಿರೋಧಿಸೋ ನೆಪದಲ್ಲಿ ದೇಶಕ್ಕೆ ಅವಮಾನ ಮಾಡಬೇಡಿ: ಗುಲ್​ ಪನಾಗ್​
ಮೋದಿಯನ್ನು ವಿರೋಧಿಸೋ ನೆಪದಲ್ಲಿ ದೇಶಕ್ಕೆ ಅವಮಾನ ಮಾಡಬೇಡಿ: ಗುಲ್​ ಪನಾಗ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿ ಕುರಿತು ಅಪಹಾಸ್ಯ ಮಾಡಿದ್ದ ಧ್ರುವ್​ ರಾಠಿ
  • ಮೋದಿಯನ್ನು ವಿರೋಧಿಸೋ ನೆಪದಲ್ಲಿ ದೇಶಕ್ಕೆ ಅವಮಾನ ಮಾಡಬೇಡಿ: ಗುಲ್​ ಪನಾಗ್​
  • ಧ್ರುವ್​ ರಾಠಿ ಹೇಳಿಕೆಗೆ ಖಡಕ್​ ಕೌಂಟರ್​ ಕೊಟ್ಟ ಬಾಲಿವುಡ್​ ನಟಿ
ಟ್ವಿಟರ್​: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದಾಗ ನಾರ್ವೆ ದೇಶದ ಪರ್ತಕರ್ತೆಯ ಪ್ರಶ್ನೆಗೆ ಉತ್ತರಿಸದ ಕಾರಣ ಅವರನ್ನು ಅಪಹಾಸ್ಯ ಮಾಡಿದ್ದ ಯೂಟ್ಯೂಬರ್ ಧ್ರುವ್​ ರಾಠಿಗೆ ಬಾಲಿವುಡ್​ ನಟಿ ಗುಲ್ ಪನಾಗ್ (Gul Panag on Dhruv Rathee) ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹಂಗಿಸಿ ಧ್ರುವ್​ ರಾಠಿ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್​ಗೆ ಗುಲ್ ಪನಾಗ್ ಕೌಂಟರ್​ ಕೊಟ್ಟಿದ್ದಾರೆ.

ಧ್ರುವ್​ ರಾಠಿ ಬರೆದಿದ್ದೇನು?

ಭಾರತದ ಪ್ರಧಾನಿ ನರೇಂದ್ರ ಮೋದಿ ನಾರ್ವೆ ಪರ್ತಕರ್ತೆಯ ಪ್ರಶ್ನೆಗೆ ಉತ್ತರಿಸಿದ ಕುರಿತು ಅಪಹಾಸ್ಯ ಮಾಡಿದ್ದ ಧ್ರುವ್​ ರಾಠಿ, ಮೇ. 19 ರಂದು, ಮೋದಿ ಹೋದಲ್ಲೆಲ್ಲಾ ಅವಮಾನಕ್ಕೆ ಗುರಿಯಾಗಬೇಕು, ಕಳೆದ 12 ವರ್ಷಗಳಿಂದ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೆ ಪ್ರಧಾನಿ ಹುದ್ದೆಯಲ್ಲಿದ್ದಾರೆ.
ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸುವಲ್ಲಿ ಹಾಗೂ ಪಾರದರ್ಶಕ ಆಡಳಿತ ನಡೆಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಬರೆದು ಕೊಂಡಿದ್ದರು. ಹಾಗೆಯೇ ನಾರ್ವೆ ಪರ್ತಕರ್ತೆ ಜೊತೆ ನಡೆದ ಘಟನೆಯನ್ನು ಉದ್ದೇಶಿಸಿ ಧ್ರುವ್​, ನಾನು ವಿದೇಶಿ ಮಾಧ್ಯಮಗಳಿಗೆ ಈ ಮೋದಿ ಎಲ್ಲಿ ಹೋದರು ಇತನಿಗೆ ಅವಮಾನ ಮಾಡಿ ಎಂದು ಕೇಳಿಕೊಳ್ಳುತ್ತೇನೆಂದು ಹೇಳಿದ್ದರು.

ಗುಲ್​ ಪನಾಗ್​ ರಿಯಾಕ್ಷನ್​ ಏನಿದೆ?

ಧ್ರುವ್​ ರಾಠಿ ಹೀಗೆ ದೇಶದ ಪ್ರಧಾನಿಗೆ ಮಾಡಿರುವ ಅಪಹಾಸ್ಯದಿಂದ ಕೋಪಗೊಂಡ ನಟಿ, ನಿಮಗೆ ಸರ್ಕಾರದ ಬಗ್ಗೆ ಅಸಮಾಧಾನವಿದ್ದರೆ ಪ್ರತಿಭಟಿಸಿ, ಪ್ರಧಾನಿಯನ್ನು ಇಷ್ಟ ಪಡಬೇಡಿ, ವಾಗ್ವಾದ ನಡೆಸಿ ಅವನ್ನು ಮಾಡಲು ನಿಮಗೆ ಸ್ವಾತಂತ್ರವನ್ನು ಪ್ರಜಾಪ್ರಭುತ್ವ ನೀಡಿದೆ.
ಆದರೆ ಪ್ರಧಾನಿ ಹುದ್ದೆ, ಅಥವಾ ಅವರು ವಿದೇಶದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾಗ ಅದರ ಕುರಿತು ಅಪಹಾಸ್ಯ ಮಾಡುವುದನ್ನು ಖಂಡಿತವಾಗಿ ಸಹಿಸಲು ಸಾಧ್ಯವಿಲ್ಲ, ಹಾಗೆಯೇ ವಿದೇಶದಲ್ಲಿ ಕುಳಿತು ದೇಶದವರ ಬಗ್ಗೆ ಹಾಸ್ಯ ಮಾಡುವುದು ಶೋಭನಿಯವಲ್ಲ ಎಂದು ಗುಲ್​ ಪನಾಗ್​ ಹೇಳಿದ್ದಾರೆ.

ನಾರ್ವೆಯಲ್ಲಿ ಆಗಿದ್ದೇನು?

ಕೆಲ ದಿನಗಳ ಹಿಂದೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾರ್ವೆ ದೇಶದ ಪ್ರವಾಸದಲ್ಲಿದ್ದಾಗ ಓಸ್ಲೋನಲ್ಲಿ ಅಲ್ಲಿಯ ಪ್ರಧಾನಿ ಜೋನಸ್ ಗಹರ್ ಸ್ಟೋರೆ (Jonas Gahr Støre) ಜೊತೆಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ನಂತರ ಪ್ರಧಾನಿ ಮೋದಿ ಹಿಂತಿರುಗಿದ್ದ ವೇಳೆ ಹೆಲ್ಲೆ ಲಿಂಗ್ (Helle Lyng) ಎಂಬ ನಾರ್ವೆ ದೇಶದ ಪರ್ತಕರ್ತೆ, ಪ್ರಧಾನಿ ಮೋದಿ ಅವರೇ, ನೀವು ಜಗತ್ತಿನ ಅತ್ಯಂತ ಮುಕ್ತ ಪತ್ರಿಕಾ ಮಾಧ್ಯಮದಿಂದ ಕೆಲವು ಪ್ರಶ್ನೆಗಳನ್ನು ಏಕೆ ಕೇಳಬಾರದು? ಎಂದು ಪ್ರಶ್ನಿಸಿದಳು. ಆದರೆ ಮೋದಿ ಈ ಪ್ರಶ್ನೆಗೆ ಉತ್ತರಿಸದೆ ಮರಳಿದರು.
ನಂತರ ಈ ಕುರಿತು ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್ ಮಾಡಿದ ಹೆಲ್ಲೆ ಲಿಂಗ್ (Helle Lyng) ಭಾರತದ ಪ್ರಧಾನಿ ನನ್ನ ಪ್ರಶ್ನೆಗೆ ಉತ್ತರಿಸದೆ ಹೋದರು, ನಾನು ಅವರಿಂದ ಇದನ್ನು ನೀರಿಕ್ಷೆ ಮಾಡಿರಲಿಲ್ಲ ಎಂದು ಬರೆದುಕೊಂಡಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net