ವಿರಾಟ್, ರೋಹಿತ್​ರನ್ನು ಕೆಣಕಬೇಡಿ; ಭಾರತದ ಮಾಜಿ ಹೆಡ್​ಕೋಚ್​ ಕೌಂಟರ್ |​ Virat and Rohit

Virat and Rohit | ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
Virat and Rohit | ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
Published on
ಮುಂಬೈ: ಭಾರತದ ಸ್ಟಾರ್​ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ( Virat and Rohit) ಅವರ ಕ್ರಿಕೆಟ್ ವೃತ್ತಿಜೀವನ ಅಸ್ಥಿರಗೊಳಿಸುವವರ ವಿರುದ್ಧ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಭಾರತೀಯ ತಂಡದಲ್ಲಿ ರೋಕೊ ಜೋಡಿಯ ಭವಿಷ್ಯದ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ. ಅಲ್ಲದೆ, ಕೆಲವು ಜನಗಳು ಏಕದಿನ ದಿಗ್ಗಜರಾದ ಕೊಹ್ಲಿ ಮತ್ತು ರೋಹಿತ್ ವೃತ್ತಿಜೀವನ ಮತ್ತು ಖ್ಯಾತಿಯೊಂದಿಗೆ ಗೊಂದಲದ ವಾತವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನ ದೈತ್ಯರು. ಆ ಮಟ್ಟದ ಆಟಗಾರರೊಂದಿಗೆ ನೀವು ಗೊಂದಲಕ್ಕೆ ಸಿಲುಕಿಸಬಾರದು. ಅಲ್ಲದೆ, ವಿಶೇಷವಾಗಿ ಭಾರತದ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ, ಇಬ್ಬರು ಬ್ಯಾಟಿಂಗ್ ಐಕಾನ್‌ಗಳ ಸ್ಥಾನಗಳು ಮತ್ತು ಪಾತ್ರಗಳ ಸುತ್ತಲಿನ ಪ್ರಸ್ತುತ ಯಾವುದೇ ಗದ್ದಲ ಸೃಷ್ಟಿಸಬಾರದು ಎಂದಿದ್ದಾರೆ.
ಇಬ್ಬರು ಸ್ಟಾರ್​ ಆಟಗಾರರರು ಟೆಸ್ಟ್ ಮತ್ತು ಟಿ20ಯಿಂದ ನಿವೃತ್ತರಾಗಿದ್ದಾರೆ. ಅಲ್ಲದೆ, ಉಭಯ ಆಟಗಾರರ ಬಗ್ಗೆ ಕೆಲವಷ್ಟು ಜನರು ಊಹಾಪೋಹಗಳನ್ನು ಹುಟ್ಟಹಾಕುತ್ತಿದ್ದಾರೆ. ಉಭಯ ಆಟಗಾರರನ್ನು ಆಯ್ಕೆ ಸಮಿತಿಯ ಅಧ್ಯಕ್ಷರಾದ ಅಜಿತ್ ಅಗರ್ಕರ್ ಬಲವಾಗಿ ಬೆಂಬಲಿಸುವಂತೆ ಶಾಸ್ತ್ರಿ ಒತ್ತಾಯಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಗೆ ತಮ್ಮನ್ನು ತಾವು ಲಭ್ಯವಾಗುವಂತೆ ಮಾಡುವ ಮೂಲಕ ಬಿಸಿಸಿಐ ಮಾನದಂಡಗಳನ್ನು ಪೂರೈಸಲು ರೋಹಿತ್ ಒಪ್ಪಿಕೊಂಡಿದ್ದಾರೆ. ಆದರೆ ಕೊಹ್ಲಿ ದೇಶೀಯ ಕ್ರಿಕೆಟ್‌ಗೆ ಮರಳಲು ನಿರಾಕರಿಸಿದರು. ಆಯ್ಕೆದಾರರ ಮನವೊಲಿಕೆಯ ನಂತರ ಯು-ಟರ್ನ್ ತೆಗೆದುಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net