"ಪ್ರಧಾನಿ ಮೋದಿ ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಸ್ನೇಹ ಮತ್ತು ಗೌರವದಿಂದ ಅವರ ಕೋರಿಕೆಯ ಮೇರೆಗೆ, ತಕ್ಷಣವೇ ಜಾರಿಗೆ ಬರುವಂತೆ, ಆಮದು ಸುಂಕವನ್ನು ಇಳಿಸಿದ್ದೇವೆ. ಇದರೊಟ್ಟಿಗೆ ಭಾರತ ಮತ್ತು ಅಮೆರಿಕ ನಡುವಿನ ಟ್ರೇಡ್ ಡೀಲ್ಗೂ ಒಪ್ಪಿಕೊಂಡಿದ್ದೇವೆ. ದೂರವಾಣಿ ಕರೆಯಲ್ಲಿ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಸಮ್ಮತಿ ಸೂಚಿಸಿದೆ. ಇದರೊಟ್ಟಿಗೆ, ತೈಲ ಆಮದುಗಳನ್ನು ಅಮೆರಿಕ ಮತ್ತು ವೆನೆಜುವೆಲಾದಿಂದ ಪಡೆಯಲು ಮೋದಿ ಅಸ್ತು ಎಂದಿದ್ದಾರೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ನಲ್ಲಿ ಬರೆದುಕೊಂಡಿದ್ದಾರೆ.