ಗಗನಕ್ಕೇರುತ್ತಿದೆ ಗ್ಯಾಸ್ ದರ! ಮತ್ತೆ 29 ರೂಪಾಯಿ ಹೆಚ್ಚಳ; ನಿಮ್ಮ ನಗರದ ಇಂದಿನ ರೇಟ್ ಎಷ್ಟು? LPG Price Hike
LPG Price Hike ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣದ ಪರಿಣಾಮ ಗ್ರಾಹಕರ ಅಡುಗೆಮನೆಗೆ ತಟ್ಟಿದೆ
ದೇಶೀಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 29 ರೂಪಾಯಿ ಹೆಚ್ಚಳ
ಜಾಗತಿಕ ಪೂರೈಕೆ ಸರಪಳಿಗಳಲ್ಲಿನ ಅಡೆತಡೆಗಳಿಂದಾಗಿ ದರಗಳನ್ನು ಮಾರ್ಚ್ 7 ರಂದು ಬೆಲೆಗ 60 ರೂಗಳಿಗೆ ಹೆಚ್ಚಿಸಲಾಗಿತ್ತು
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣಗಳು ಮತ್ತು ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳ ನೇರ ಪರಿಣಾಮ ಈಗ ದೇಶದ ಸಾಮಾನ್ಯ ಗ್ರಾಹಕರ ಅಡುಗೆಮನೆಗೆ ತಟ್ಟಿದೆ. ದೇಶೀಯ ಬಳಕೆಯ ಎಲ್‌ಪಿಜಿ (LPG Price Hike) ಸಿಲಿಂಡರ್ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 29 ರೂಪಾಯಿ ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಇಂದಿನಿಂದಲೇ (ಭಾನುವಾರ) ಅನ್ವಯವಾಗಲಿವೆ ಎಂದು ತೈಲ ಕಂಪನಿಗಳು ಪ್ರಕಟಿಸಿವೆ.
ಇದರೊಂದಿಗೆ, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 913 ರೂ.ಗಳ ಬದಲು 942 ರೂ.ಗಳಾಗಲಿದ್ದು, ಮುಂಬೈನಲ್ಲಿ ದರಗಳು 941.50 ರೂ., ಕೋಲ್ಕತ್ತಾದಲ್ಲಿ 968 ರೂ., ಚೆನ್ನೈನಲ್ಲಿ 957.50 ರೂ. ಮತ್ತು ಬೆಂಗಳೂರಿನಲ್ಲಿ ಈಗ 944.50 ರೂ ಏರಿಕೆ ಕಂಡುಬಂದಿದೆ.
ಆದಾಗ್ಯೂ, ಜಾಗತಿಕ ಪೂರೈಕೆ ಸರಪಳಿಗಳಲ್ಲಿನ ಅಡೆತಡೆಗಳಿಂದಾಗಿ ದರಗಳನ್ನು ಮಾರ್ಚ್ 7 ರಂದು ಬೆಲೆಗ 60 ರೂಗಳಿಗೆ ಹೆಚ್ಚಿಸಲಾಗಿತ್ತು. ಇದರ ಹೊರತಾಗಿಯೂ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ಎಲ್‌ಪಿಜಿ ನಷ್ಟವನ್ನು ಅನುಭವಿಸುತ್ತಲೇ ಇದ್ದವು.
ಇತ್ತೀಚಿನ ಬೆಲೆ ಏರಿಕೆಗೆ ಮುನ್ನ ಮಾರಾಟವಾದ ಪ್ರತಿ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಸರ್ಕಾರಿ ಸ್ವಾಮ್ಯದ ಒಎಂಸಿಗಳು ಸುಮಾರು 703 ರೂ. ನಷ್ಟ ಅನುಭವಿಸುತ್ತಿವೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ. ಒಎಂಸಿಗಳು ಮೇ ತಿಂಗಳಿಂದ ಪೆಟ್ರೋಲ್, ಡೀಸೆಲ್ ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ದರಗಳನ್ನು ಹಲವು ಬಾರಿ ಹೆಚ್ಚಿಸಿವೆ.
ಪಿಟಿಐ ವರದಿ ಪ್ರಕಾರ, ಮೇ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ ಒಟ್ಟು 7.50 ರೂ.ಗಳಷ್ಟು ಹೆಚ್ಚಾಗಿದ್ದರೆ, ಸಿಎನ್‌ಜಿ ದರಗಳು ಪ್ರತಿ ಕೆಜಿಗೆ 6 ರೂ.ಗಳಷ್ಟು ಹೆಚ್ಚಾಗಿವೆ.
ಗ್ರಾಹಕರಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಕಡಿಮೆ, ಏಕೆಂದರೆ ಅಮೆರಿಕ-ಇರಾನ್ ನಡುವಿನ ಬಿಕ್ಕಟ್ಟು ಸದ್ಯದಲ್ಲಿ ಕೊನೆಗೊಳ್ಳುವುದಿಲ್ಲ ಆದರಿಂದ ಇಂಧನ ಮಾರುಕಟ್ಟೆಗಳು ಅಸ್ಥಿರವಾಗಿಯೇ ಇರುತ್ತದೆ. ಆದಾಗ್ಯೂ, ಸರ್ಕಾರವು ಹೆಚ್ಚಿನ ಅಂತರರಾಷ್ಟ್ರೀಯ ಇಂಧನ ಬೆಲೆಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ರವಾನಿಸಲು ಅನುಮತಿಸಿಲ್ಲ.
ಈ ವಾರದ ಆರಂಭದಲ್ಲಿ, ಸಾಕಷ್ಟು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಇಂಧನ ದರಗಳು ನಿಯಂತ್ರಣದಲ್ಲಿರಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಮತ್ತೊಮ್ಮೆ ಪುನರುಚ್ಚರಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಗೃಹಬಳಕೆಯ ಎಲ್‌ಪಿಜಿ (LPG) ಅಡುಗೆ ಸಿಲಿಂಡರ್‌ನ ಮೇಲಿನ ತೈಲ ಕಂಪನಿಗಳ ಕಡಿಮೆ ವಸೂಲಾತಿ (Under-recovery) ಪ್ರಮಾಣವು ಇನ್ನೂ ಸುಮಾರು 700 ರೂಪಾಯಿಗಳ ಆಸುಪಾಸಿನಲ್ಲೇ ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಗುರುವಾರ ತಿಳಿಸಿದ್ದಾರೆ.
ನಮ್ಮ ವಾಣಿಜ್ಯ ಮತ್ತು ಕೈಗಾರಿಕಾ ಎಲ್ಪಿಜಿಯಲ್ಲಿ ಕಡಿಮೆ ದರ ಕಂಡುಬಂದಿದ್ದು, ಅವುಗಳಿಗೆ ಮೂರು ಕಾರಣಗಳಿವೆ. ಅವುಗಳೆಂದರೆ, ಬುಕಿಂಗ್ ಅವಧಿಯ ನಿರ್ವಹಣೆ, ದೀರ್ಘಾವಧಿ ಬುಕಿಂಗ್ ನಿರ್ವಹಣೆ, ಡಿಎಸಿ (DAC) ಲಿಂಕ್ಡ್ ವಿತರಣೆಗಳು ಎಂದು ಹೇಳಿದ್ದಾರೆ (ಏಜೆನ್ಸೀಸ್).