ಹನುಮಂತನ ಗುಡಿಯಲ್ಲಿ 36 ಗಂಟೆ ನಾಯಿಯ 'ಪ್ರದಕ್ಷಿಣೆ': ಚಮತ್ಕಾರ ನೋಡಲು ಮುಗಿಬಿದ್ದ ಸಾವಿರಾರು ಭಕ್ತರು! | Hanuman Temple
Hanuman temple
Published on:
Copied
Follow Us
ಬಿಜ್ನೋರ್ (ಉತ್ತರ ಪ್ರದೇಶ): ಇಲ್ಲಿನ ನಂದಪುರ ಗ್ರಾಮದ ಹನುಮಾನ್ ಮಂದಿರದಲ್ಲಿ ಕಳೆದ ಎರಡು ದಿನಗಳಿಂದ ಅದ್ಭುತವೊಂದು ನಡೆಯುತ್ತಿದೆ ಎಂದು ಸ್ಥಳೀಯರು ನಂಬಿದ್ದಾರೆ. ಬೀದಿನಾಯಿಯೊಂದು ಸತತವಾಗಿ ಹನುಮಂತನ ಮೂರ್ತಿಯ ಸುತ್ತ ಪ್ರದರ್ಶನ (ಪರಿಕ್ರಮ) ಹಾಕುತ್ತಿದೆ. ಸೋಮವಾರ ಬೆಳಿಗ್ಗೆ 4 ಗಂಟೆಗೆ ಆರಂಭವಾದ ಈ ನಾಯಿಯ ನಡಿಗೆ ಸುಮಾರು 36 ಗಂಟೆಗಳ ಕಾಲ ಸತತವಾಗಿ ಮುಂದುವರಿದಿದೆ ಎನ್ನಲಾಗಿದೆ.
ಭಕ್ತರ ದಂಡು ಮತ್ತು ಭಜನೆ
ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಇದನ್ನು 'ಕಲಿಯುಗದ ಚಮತ್ಕಾರ' ಎಂದು ಭಾವಿಸಿದ್ದಾರೆ. ನಾಯಿಯು ಹನುಮಂತನ ಪರಮ ಭಕ್ತನಂತೆ ಮೂರ್ತಿಯ ಸುತ್ತ ಸುತ್ತುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಭಜನೆ ಮತ್ತು ಕೀರ್ತನೆಗಳು ಆರಂಭವಾಗಿದ್ದು, ಜನರು ನಾಯಿಗೆ ಹೂಮಾಲೆ ಹಾಕಿ ಪೂಜಿಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಸಹ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ವೈದ್ಯಕೀಯ ವಿವರಣೆ ನೀಡಿದ AI
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣವಾದ 'X' ನಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಇದನ್ನು ದೈವಿಕ ಶಕ್ತಿ ಎಂದು ಬಣ್ಣಿಸಿದ್ದಾರೆ. ಆದರೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ Grok, ಈ ನಡವಳಿಕೆಗೆ ವೈಜ್ಞಾನಿಕ ಮತ್ತು ವೈದ್ಯಕೀಯ ಕಾರಣಗಳನ್ನು ನೀಡಿದೆ.
Grok ಪ್ರಕಾರ, ಪ್ರಾಣಿಗಳು ಈ ರೀತಿ ವೃತ್ತಾಕಾರದಲ್ಲಿ ಸತತವಾಗಿ ಸುತ್ತುವುದಕ್ಕೆ 'Circling Disease' ಅಥವಾ ನರಸಂಬಂಧಿ ಕಾಯಿಲೆಗಳು ಕಾರಣವಾಗಿರಬಹುದು.
ವೆಸ್ಟಿಬುಲರ್ ಸಿಂಡ್ರೋಮ್ (Vestibular Disease): ಇದು ನಾಯಿಯ ಸಮತೋಲನವನ್ನು ನಿಯಂತ್ರಿಸುವ ಕಿವಿಯ ಒಳಗಿನ ಭಾಗ ಅಥವಾ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಾಯಿ ದಿಕ್ಕು ತಿಳಿಯದೆ ವೃತ್ತಾಕಾರದಲ್ಲಿ ಸುತ್ತುತ್ತದೆ.
ಮೆದುಳಿನ ಸೋಂಕು ಅಥವಾ ಗಡ್ಡೆ: ಮೆದುಳಿನಲ್ಲಿ ಉರಿಯೂತ (Encephalitis) ಅಥವಾ ಗಡ್ಡೆಗಳಿದ್ದರೆ ನಾಯಿಗಳು ತಮ್ಮ ನಡವಳಿಕೆಯ ಮೇಲೆ ನಿಯಂತ್ರಣ ಕಳೆದುಕೊಂಡು ಈ ರೀತಿ ವರ್ತಿಸುತ್ತವೆ.
ಡಿಸ್ಟೆಂಪರ್ ವೈರಸ್: ನಾಯಿಗಳಲ್ಲಿ ಕಂಡುಬರುವ ಈ ವೈರಸ್ ನರಮಂಡಲದ ಮೇಲೆ ದಾಳಿ ಮಾಡಿದಾಗಲೂ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಭಕ್ತರು ಇದನ್ನು ಭಕ್ತಿ ಮತ್ತು ಚಮತ್ಕಾರ ಎಂದು ನಂಬಿದ್ದಾರೆ. ಬೀದಿನಾಯಿಯೊಂದು ಸತತವಾಗಿ ಹನುಮಂತನ ಮೂರ್ತಿಯ ಸುತ್ತ ಪ್ರದರ್ಶನ (ಪರಿಕ್ರಮ) ಹಾಕುತ್ತಿರುವುದ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).