ಮಧ್ಯಪ್ರದೇಶ: ( Dog) ಶಿವಪುರಿಯಲ್ಲಿ ವೃದ್ಧರೊಬ್ಬರು ನಿಧನರಾದಾಗ, ಅವರ ಸಾಕುನಾಯಿ ತನ್ನ ಯಜಮಾನನ ಮೇಲಿನ ನಿಷ್ಠೆಯನ್ನು ಸಾಬೀತುಪಡಿಸಿದೆ. ವೃದ್ಧನ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದಾಗ, ಈ ನಾಯಿ ಶವವಾಹನದ ಹಿಂದೆ ಸುಮಾರು 4 ಕಿಲೋಮೀಟರ್‌ಗಳಷ್ಟು ದೂರ ನಿರಂತರವಾಗಿ ಓಡಿದೆ. ನಾಯಿಯೊಂದು ತನ್ನ ಯಜಮಾನನ ಮೇಲಿದ್ದ ಪ್ರೀತಿಯನ್ನು ಕಂಡು ಇಡೀ ಊರೇ ಕಣ್ಣೀರು ಹಾಕಿದೆ.