ಮೊಲದ ಮಾಂಸ ಎಂದು ನಾಯಿ ಮಾಂಸ ಮಾರಾಟ! 1 ಕೆಜಿಗೆ 1,000 ರೂ. dog meat

dog meat
dog meat
Published on

ಪ್ರಮುಖ ಮುಖ್ಯಾಂಶಗಳು

  • ಅನಾರೋಗ್ಯಕ್ಕೆ ಒಳಗಾದ ಜನರು!
  • ಕೆಜಿಗೆ 1 ಸಾವಿರ ರೂ.ಗೆ ನಾಯಿ ಮಾಂಸ ಮಾರಾಟ
  • ಮದ್ಯದ ಚಟಕ್ಕೆ ಹಳ್ಳಿಯ ಜನರೇ ಬಲಿ!
ಬಿಹಾರ: ( dog meat) ಮದ್ಯಪಾನಕ್ಕೆ ಹಣ ಇಲ್ಲದೆ ಹತಾಶಯದಲ್ಲಿದ್ದ ಯುವಕನೊಬ್ಬ ನಾಯಿಯನ್ನು ಕೊಂದಿದ್ದಾನೆ. ಶ್ವಾನದ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಅದು ಮೊಲದ ಮಾಂಸ ಎಂದು ಹೇಳಿಕೊಂಡು ಜನರಿಗೆ ಮಾರಾಟ ಮಾಡಿರುವ ಘಟನೆ ಬಿಹಾರದ ಮೋತಿಹಾರಿಯ ಗರ್ಹಿಯಾ ಗ್ರಾಮದಲ್ಲಿ ನಡೆದಿದೆ.
ಮಂಗ್ರು ಸಾಹ್ನಿ ಮದ್ಯವ್ಯಸನಿಯಾಗಿದ್ದನು. ಆತನ ಬಳಿ ಮದ್ಯ ಖರೀದಿಸಲು ಹಣವಿರಲಿಲ್ಲ. ಇದರಿಂದಾಗಿ ಆತ ನಾಯಿಯನ್ನು ಹಿಡಿದು ಕೊಂದು, ಅದರ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ಅದು ಮೊಲದ ಮಾಂಸ ಎಂದು ಹೇಳಿಕೊಂಡು ಗ್ರಾಮದಲ್ಲಿ ಮಾಂಸವನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾನೆ. ಸುಮಾರು 15 ಗ್ರಾಮಸ್ಥರು ಈ ಮಾಂಸವನ್ನು ಖರೀದಿಸಿದರು. ಪ್ರತಿ ಕಿಲೋಗ್ರಾಂಗೆ ಸುಮಾರು ಒಂದು ಸಾವಿರ ರೂಪಾಯಿಗೆ ಮಾಂಸವನ್ನು ಮಾರಾಟ ಮಾಡಿ ನಂತರ ಮದ್ಯ ಸೇವಿಸಿದ್ದಾನೆ.
ಮಾಂಸ ತಿಂದ ಕೆಲವು ಗಂಟೆಗಳ ನಂತರ ಕೆಲವರು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದರು, ಇತರರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕೆಲವು ಮಕ್ಕಳ ಸ್ಥಿತಿಯೂ ಹದಗೆಟ್ಟಿತು. ಮೊಲದ ಮಾಂಸವಲ್ಲ, ನಾಯಿ ಮಾಂಸವನ್ನು ನೀಡಿದ್ದೇನೆ ಎಂದು ಮಂಗ್ರು ಸಾಹ್ನಿ ಹೇಳಿದ್ದಾನೆ. ನಂತರ ಈ ವಿಚಾರವಾಗಿ ಗ್ರಾಮದಲ್ಲಿ ಗಲಾಟೆ ಆರಂಭವಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ.
ಗ್ರಾಮದ ಬಳಿಯ ತೋಟದಲ್ಲಿ ನಾಯಿಯ ಕತ್ತರಿಸಿದ ತಲೆ ಮತ್ತು ಪಂಜಗಳು ಪತ್ತೆಯಾಗಿದ್ದು, ಆರೋಪಗಳು ದೃಢಪಟ್ಟಿವೆ. ಕೋಪಗೊಂಡ ಗ್ರಾಮಸ್ಥರು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗರ್ಹಿಯಾ ಪೊಲೀಸ್ ಠಾಣೆಗೆ ಲಿಖಿತ ಅರ್ಜಿಯನ್ನು ಸಲ್ಲಿಸಿದರು.
ಗರ್ಹಿಯಾ ಪೊಲೀಸ್ ಠಾಣಾಧಿಕಾರಿ ಆದಿತ್ಯ ಕುಮಾರ್ ಮಾತನಾಡಿ, ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ತನಿಖೆಯ ನಂತರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net