ಇ-20 ಪೆಟ್ರೋಲ್ ಕೇವಲ ಮೈಲೇಜ್ ಅನ್ನು ಕಡಿಮೆ ಮಾಡುತ್ತಿಲ್ಲ, ಬದಲಿಗೆ ವಾಹನಗಳ ರಿಪೇರಿ ವೆಚ್ಚವನ್ನೂ ಹೆಚ್ಚಿಸುತ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 45 ರಷ್ಟು ಜನರು ಈ ಪೆಟ್ರೋಲ್ ಬಳಕೆಯಿಂದ ತಮ್ಮ ವಾಹನದ ಬಿಡಿಭಾಗಗಳು ಬೇಗನೆ ಸವೆಯುತ್ತಿವೆ ಎಂದು ಹೇಳಿದ್ದಾರೆ. ಹಳೆಯ ವಾಹನಗಳಲ್ಲಿರುವ ಇಂಧನ ಪೈಪ್‌ಗಳು, ರಬ್ಬರ್ ಸೀಲ್‌ಗಳು, ಗ್ಯಾಸ್ಕೆಟ್‌ಗಳು ಮತ್ತು ಫ್ಯುಯೆಲ್ ಪಂಪ್‌ಗಳನ್ನು ಎಥನಾಲ್‌ನ ತೀವ್ರತೆಯನ್ನು ತಡೆದುಕೊಳ್ಳುವಂತೆ ತಯಾರಿಸಿರುವುದಿಲ್ಲ, ಹಾಗಾಗಿ ಈ ಪೆಟ್ರೋಲ್ ಬಳಸುವುದರಿಂದ ಅವು ಬೇಗನೆ ಹಾಳಾಗಬಹುದು ಎಂದು ಆಟೋಮೊಬೈಲ್ ತಜ್ಞರು ಎಚ್ಚರಿಸಿದ್ದಾರೆ.