ಭಾರತವು ಪ್ರತಿ ವರ್ಷ ಸುಮಾರು 24 ಮಿಲಿಯನ್ ಮೆಟ್ರಿಕ್ ಟನ್ ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತದೆ. ಇದರಲ್ಲಿ, ಸುಮಾರು 32,000 ಮೆಟ್ರಿಕ್ ಟನ್‌ಗಳನ್ನು ರಫ್ತು ಮಾಡಲಾಗುತ್ತದೆ. ಆದರೆ, ಬಹುಪಾಲು ದೇಶೀಯ ಮಾರುಕಟ್ಟೆಗೆ ಸೀಮಿತವಾಗಿದೆ. ಅಗ್ರ 5 ಮಾವಿನ ಪ್ರಭೇದಗಳಿಗೆ ದೇಶದ ಪ್ರಮುಖ ರಫ್ತು ತಾಣವೆಂದರೆ ಅದು ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಯುನೈಟೆಡ್ ಕಿಂಗ್‌ಡಮ್ (ಯುಕೆ), ನೆದರ್‌ಲ್ಯಾಂಡ್ಸ್ ಮತ್ತು ಸೌದಿ ಅರೇಬಿಯಾ.