ಏನಿದು E20 ಪೆಟ್ರೋಲ್? ಇದರಿಂದ ವಾಹನ ಮೈಲೇಜ್​ ಡ್ರಾಪ್​ಗೆ ಹೇಗೆ ಪೆಟ್ಟು? ಇಲ್ಲಿದೆ ನೋಡಿ ಉತ್ತರ

ಇ20 ಇಂಧನ
ಇ20 ಇಂಧನ
Published on

ಪ್ರಮುಖ ಮುಖ್ಯಾಂಶಗಳು

  • E20 ಪೆಟ್ರೋಲ್ ಎಂಬುದು ಶೇ.80ರಷ್ಟು ಬೆರೆಸಿದ ಶೇ.20ರಷ್ಟು ಎಥೆನಾಲ್ ಇಂಧನ
  • ಈ ಮಿಶ್ರಿತ ಇಂಧನದಿಂದ ವಾಹನಗಳ ಮೈಲೇಜ್​ ಕುಸಿತ?
  • ಅಷ್ಟಕ್ಕೂ ಇದರ ಬಗ್ಗೆ 2021ರ ನೀತಿ ಆಯೋಗ ವರದಿ ಹೇಳುವುದೇನು?
ನವದೆಹಲಿ: E20 ಪೆಟ್ರೋಲ್ ಎಂಬುದು ಶೇ.80ರಷ್ಟು ಬೆರೆಸಿದ ಶೇ.20ರಷ್ಟು ಎಥೆನಾಲ್ ಒಳಗೊಂಡಿರುವ ಇಂಧನವಾಗಿದೆ. ಎಥೆನಾಲ್ ಪ್ರಾಥಮಿಕವಾಗಿ ಕಬ್ಬು ಮತ್ತು ಇತರ ಕೃಷಿ ಉಪಉತ್ಪನ್ನಗಳಿಂದ ಪಡೆದ ಜೈವಿಕ ಪೆಟ್ರೋಲ್​ ಎಂಬ ಸಂಗತಿ ಇಲ್ಲಿ ಗಮನಾರ್ಹ. ಇದು ಪೆಟ್ರೋಲ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಉರಿಯುತ್ತದೆ ಹಾಗೂ ವಾಹನಗಳಿಂದ ಮಾಲಿನ್ಯಕಾರಕ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ.
ದೇಶದಲ್ಲಿ ವಾಹನ ತಯಾರಕರು ಈಗಾಗಲೇ ಈ ಇಂಧನಕ್ಕೆ ಹೊಂದಿಕೆಯಾಗುವ ಇಂಜಿನ್‌ಗಳನ್ನು ತಯಾರಿಸುತ್ತಿದ್ದಾರೆ. ಇಷ್ಟಾದರೂ ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಅನ್ನು ಹಳೆಯ ವಾಹನಗಳ ಇಂಜಿನ್‌ಗಳಿಗೆ ಬಳಸಿದರೆ, ಆ ಇಂಜಿನ್​ಗಳು​ ತುಕ್ಕು ಹಿಡಿಯುತ್ತದೆ ಎನ್ನಲಾಗಿದೆ. ಇದು ಅನೇಕ ವಾಹನ ಸವಾರರ ಅಸಮಾಧಾನಕ್ಕೂ ಕಾರಣವಾಗಿದೆ.

2023ಕ್ಕೂ ಹಿಂದಿನ ವಾಹನಗಳಿಗೆ ಎಫೆಕ್ಟ್​!

ಅಸಲಿ ಸಮಸ್ಯೆಯೆಂದರೆ 2023ರ ಮೊದಲು ತಯಾರಿಸಿದ ವಾಹನಗಳಿಗೆ ಹೆಚ್ಚು ಒಡೆತ ಎನ್ನಲಾಗಿದೆ. ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸಿದರೆ ಕಾರು ಅಥವಾ ಬೈಕ್ ಇಂಜಿನ್‌ ಹಾನಿಯಾಗುವ ಅಪಾಯ ಉಂಟು. ಪ್ರತಿ ಬಾರಿ ಕಾರು ಅಥವಾ ಬೈಕನ್ನು ದುರಸ್ತಿಗೆ ತೆಗೆದುಕೊಳ್ಳಬೇಕಾದಾಗ, ಕೇಂದ್ರವು ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಸಹ ಹೆಚ್ಚಿಸಿದೆ.
ಅಂತಹ ಪರಿಸ್ಥಿತಿಯಲ್ಲಿ, ಹಳೆಯ ವಾಹನಗಳನ್ನು ಖರೀದಿಸುವುದರಿಂದ ನಿಮಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯವರೆಗೆ ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಕೇವಲ ಶೇ.10ರಷ್ಟಿತ್ತು. ಕಳೆದ ವರ್ಷ ಆಗಸ್ಟ್ 1ರಿಂದ ಕೇಂದ್ರವು ಅದನ್ನು ಶೇ.20ರಷ್ಟು ಹೆಚ್ಚಿಸಿದೆ. ಪೆಟ್ರೋಲ್‌ಗಿಂತ ಅಗ್ಗದ ಬೆಲೆಯಲ್ಲಿ ಎಥೆನಾಲ್ ಲಭ್ಯವಿದೆ.

ಮೈಲೇಜ್​ಗೆ ಹೊಡೆತ?

ವಾಹನಗಳಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ (E20) ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರ ಕ್ರಮಗಳನ್ನು ಚುರುಕುಗೊಳಿಸಿದೆ. ಆದಾಗ್ಯೂ, ಆಟೋಮೊಬೈಲ್ ಉದ್ಯಮಕ್ಕೆ ಸಂಬಂಧಿಸಿದ ಒಂದಷ್ಟು ತಜ್ಞರು, ಈ ರೀತಿಯ ಪೆಟ್ರೋಲ್​, ಇಂಧನ ದಕ್ಷತೆಯ ಮೇಲೆ ಅಂದರೆ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. 2021ರ NITI ಆಯೋಗದ ವರದಿಯು, E20 ಎಥೆನಾಲ್ ಮಿಶ್ರಣ ಪೆಟ್ರೋಲ್ ಮೈಲೇಜ್​ಗೆ ಹೊಡೆತ ನೀಡುತ್ತದೆ ಎಂದು ಒತ್ತಿ ಹೇಳಿದೆ.
E20 ಇಂಧನ ವಾಹನಗಳ ಮೈಲೇಜ್‌ನಲ್ಲಿ ಶೇ.2ರಿಂದ 6ರಷ್ಟು ಕಡಿತಕ್ಕೆ ಕಾರಣವಾಗುವುದರಿಂದ ಗ್ರಾಹಕರು ಎರಡು ಪಟ್ಟು ಹೊಡೆತವನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಇಂಧನ ಬೆಲೆಗಳನ್ನು ಪಾವತಿಸಿದರೂ ತಮ್ಮ ವಾಹನದ ಮೈಲೇಜ್ ಕಡಿಮೆಯಾಗುತ್ತಿರುವುದು ಹಲವರು ಸಿಡಿಮಿಡಿಗೊಂಡಿದ್ದಾರೆ. ಆದಾಗ್ಯೂ, ನೀತಿ ಆಯೋಗ ವರದಿಯು, ಮೈಲೇಜ್‌ನಲ್ಲಿನ ನಷ್ಟವನ್ನು ಸರಿದೂಗಿಸಲು ಮಿಶ್ರ ಇಂಧನಗಳ ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡಬೇಕೆಂದು ಸೂಚಿಸಿರುವುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net