CCTVಯಿಟ್ಟು ಪತ್ನಿಯ ಚಲನ ವಲನ ಗಮನಿಸ್ತಿದ್ದ ಡಾಕ್ಟರ್​ ಪತಿ; ದೈಹಿಕ, ಮಾನಸಿಕ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ..Mumbai

Doctor Installed CCTVs To Watch Wife Every Move She Died By Suicide
Doctor Installed CCTVs To Watch Wife Every Move She Died By Suicide
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದಲ್ಲಿನ ಥಾಣೆ ಜಿಲ್ಲೆಯ ಅಂಬರನಾಥ್‌ನಲ್ಲಿ ನವವಿವಾಹಿತೆ ನಿಧನ
  • ಪತ್ನಿಯ ಚಲನವಲನ ಸಿಸಿಟಿವಿಯಲ್ಲಿ ಗಮನಿಸುತ್ತಿದ್ದ ಡಾಕ್ಟರ್​ ಪತಿ
  • ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ
ಮುಂಬೈ: ಡಾಕ್ಟರ್​​​​ ಹುಡುಗನನ್ನು ಮದುವೆಯಾಗುತ್ತಿದ್ದೇನೆ. ಸುಖ ಸಂಸಾರ, ಹೊಸ ಜೀವನ ಆರಂಭಿಸಬೇಕು ಎಂದೆಲ್ಲ ಕನಸ್ಸು ಹೊತ್ತು ಅತ್ತೆ ಮನೆಗೆ ಕಾಲಿಟ್ಟ 26 ವರ್ಷದ ಯುವತಿಗೆ ಸಿಕ್ಕಿದ್ದು ಸುಖವಲ್ಲ..ಬದಲಾಗಿ ಹಿಂಸೆ. ಹೆಜ್ಜೆ ಹೆಜ್ಜೆಗೂ ಅನುಮಾನ, ನೆರೆಹೊರೆಯವರೊಂದಿಗೆ ಜೊತೆ ಮಾತನಾಡಿದರೆ,  ದೇಹದ ಮೇಲೆ ಬೀಳುವ ಒಡೆತ..ನಿಂದನೆ, ಖಾಸಗೀತನವೇ ಇಲ್ಲದೆ, ಎಲ್ಲೆಲ್ಲಿಯೂ ಕಾವಲು ಕಾಯುವ ಸಿಸಿ ಕ್ಯಾಮೇರಾ, ವರದಕ್ಷಿಣೆ ಕಿರುಕುಳ.. ಎಲ್ಲದರಿಂದ ಬೇಸತ್ತ ನವವಿವಾಹಿತೆ 45 ದಿನಕ್ಕೆ ಬದುಕಿಗೆ ಬ್ರೇಕ್​ ಕೊಟ್ಟುಕೊಂಡು ಮಸಣ ಸೇರಿದ್ದಾರೆ.
ಹೌದು,  ಪತಿಯ ಕುಟುಂಬಸ್ಥರು ನಿತ್ಯ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆ ವಿಶಾಖಾ ಎನ್ನುವವರು ಮಹಾರಾಷ್ಟ್ರದಲ್ಲಿನ ಥಾಣೆ ಜಿಲ್ಲೆಯ ಅಂಬರನಾಥ್‌ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 

ಪತಿ ಅರೆಸ್ಟ್

ಮೃತ ಯುವತಿಯನ್ನು 26 ವರ್ಷದ ವಿಶಾಖಾ ಎಂದು ಗುರುತಿಸಲಾಗಿದೆ. ಪತಿ ಡಾ. ನಿತಿನ್ ತಿಲ್ಕರ್​ನನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಖರ ಅತ್ತೆ ಛಾಯಾ ತಿಲ್ಕರ್​ ಹಾಗೂ ಸಹೋದರ ನಿನಾದ್​​ಗಾಗಿ ಶಿವಾಜಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. 

45 ದಿನಕ್ಕೆ ಆತ್ಮಹತ್ಯೆ

 ಏಪ್ರಿಲ್​ 30ರಂದು ವಿಶಾಖಾ ಮತ್ತು ನಿತಿನ್​ರ ಮದುವೆ ಅದ್ದೂರಿಯಾಗಿ ನಡೆಯಿತು. ಮದುವೆಯಾಗಿ ಒಂದೂವರೆ ತಿಂಗಳಿಗೆ  ಅತ್ತೆ ಸೇರಿದಂತೆ ಕುಟುಂಬಸ್ಥರು ಆಕೆಗೆ ಕಿರುಕುಳ ನೀಡಲು ಶುರುವಿಟ್ಟುಕೊಂಡಿದ್ದರಂತೆ. ನಿತ್ಯವೂ ಆಭರಣಕ್ಕಾಗಿ ಪೀಡಿಸುತ್ತಿದ್ದರು ಅಲ್ಲದೆ, ಸಂತ್ರಸ್ತೆ ಯಾರ ಬಳಿ ಮಾತನಾಡುತ್ತಾಳೆ. ಎಲ್ಲೆಲ್ಲಿ ನಿಲ್ಲುತ್ತಾಳೆ, ಕೂರುತ್ತಾಳೆ ಎನ್ನುವುದನ್ನು ಸಿಸಿಟಿವಿ ಅಳವಡಿಸುವ ಮೂಲಕ ವೀಕ್ಷಿಸುತ್ತಿದ್ದರು ಎನ್ನುವುದು ಪ್ರಕರಣದ ತನಿಖೆಯಿಂದ ತಿಳಿದುಬಂದಿದೆ. 

ನಿತ್ಯವೂ ಥಳಿತ

ವಿಶಾಖಾ ಒಮ್ಮೆ ತಮ್ಮ ನೆರೆಯ ಮನೆಯವರೊಂದಿಗೆ ಮಾತನಾಡಿದರೇ ಸಾಕು ಆಕೆಗೆ ವಾರ್ನಿಂಗ್​ ಕೊಟ್ಟು, ಹಿಂಸಿಸುತ್ತಿದ್ದರಂತೆ. ಇಷ್ಟೇ ಅಲ್ಲ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನದ ಹಿಂದೆ, ನೆರೆ ಮನೆಯವರೊಂದಿಗೆ ಮಾತನಾಡಿದ್ದನ್ನು ಸಿಸಿಟಿವಿ ಮೂಲಕ ಗಮಿಸಿದ ಪತಿ ಸಂಜೆ ಬಂದು ಆಕೆಯನ್ನು ತರಾಟೆಗೆ ತೆಗೆದುಕೊಂಡು ಮನಬಂದಂತೆ ಥಳಿಸಿದ್ದಾನೆ. ಇದರಿಂದ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 
ಕಿರುಕುಳದ ಬಗ್ಗೆ ವಿಶಾಖಾ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳಂತೆ. ವಾಪಸ್​ ತವರಿಗೆ ಬಾ ಎಂದು ಹೇಳುವ ಪ್ರಕ್ರಿಯೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂತ್ರಸ್ತೆಯ ಪೋಷಕರು ಹೇಳಿದ್ದಾರೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net