ವರದಿ ಪ್ರಕಾರ, ಶಿಯೋಹರ್ ಜಿಲ್ಲೆಯ ರೇಖಾ ಕುಮಾರಿ(20) ಎಂಬ ಯುವತಿ ಕಿವಿ ನೋವಿಗೆ ಚಿಕಿತ್ಸೆ ಪಡೆಯಲು ಪಾಟ್ನಾದ ಕಂಕಡ್‌ಬಾಗ್‌ನ ಮಹಾವೀರ ಆರೋಗ್ಯ ಸಂಸ್ಥಾನ ಆಸ್ಪತ್ರೆಗೆ ದಾಖಲಾಗಿದ್ರು. ಯುವತಿಯ ಪರೀಕ್ಷೆ ಮಾಡಿದ ಬಳಿಕ ನರ್ಸ್, ರಕ್ತನಾಳಕ್ಕೆ ನೀಡಬೇಕಿದ್ದ ಇಂಜೆಕ್ಷನ್ ಅನ್ನು ತಪ್ಪಾಗಿ ಅಪಧಮನಿಗೆ(Artery) ನೀಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಯುವತಿಗೆ ತೀವ್ರ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.