

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಅರುಣಾಚಲ ಪ್ರದೇಶದ ನದಿಯೊಂದರಲ್ಲಿ ಈಜುತ್ತಿರುವ ವಿಡಿಯೋವನ್ನು ಹಂಚಿಕೊಂಡು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಎಸೆದ ಕೆಲವೇ ದಿನಗಳಲ್ಲಿ, ಈ ಫಿಟ್ನೆಸ್ ಚರ್ಚೆಯು ಕಾಂಗ್ರೆಸ್ ಸಂಸದ ಪವನ್ ಖೇರಾ ಮತ್ತು ಕಿರಣ್ ರಿಜಿಜು ನಡುವಿನ ವಾಗ್ದಾಳಿಗೆ ಕಾರಣವಾಗಿದೆ.
ಹಿಮಂತ ಬಿಸ್ವ ಶರ್ಮಾ ಹೆಸರು ಪ್ರಸ್ತಾಪಿಸಿ ಎಚ್ಚರಿಕೆ
ಅರುಣಾಚಲ ಪ್ರದೇಶದ ರಭಸವಾಗಿ ಹರಿಯುವ ನದಿಯಲ್ಲಿ ಈಜುವ ವಿಡಿಯೋ ಹಂಚಿಕೊಂಡಿದ್ದ ರಿಜಿಜು, ತಾವು ಚಿಕ್ಕಂದಿನಿಂದಲೂ ನದಿಗಳಲ್ಲಿ ಈಜಿ ಬೆಳೆದವರು ಎಂದು ಹೇಳಿಕೊಂಡಿದ್ದರು. ರಾಹುಲ್ ಗಾಂಧಿ ಈಜು ಮತ್ತು ಸಮರ ಕಲೆಗಳಿಗೆ ತರಬೇತಿ ಪಡೆದಿರಬಹುದು, ಆದರೆ ನಮಗೆ ಇದು ಬಾಲ್ಯದ ಆಟ ಎಂದು ಹೇಳಿದ್ದರು. ಪ್ರಸ್ತುತ ಈ ಫಿಟ್ನೆಸ್ ಚರ್ಚೆಯು ಇಬ್ಬರೂ ನಾಯಕರ ನಡುವೆ ದೊಡ್ಡ ಮಟ್ಟದ ರಾಜಕೀಯ ವಾಗ್ದಾಳಿಗೆ ಹಾದಿಮಾಡಿಕೊಟ್ಟಿದೆ