ಅಂದು ಇಡೀ ವಿಶ್ವವೇ ಹುಡುಕಾಡಿದ ಹಳದಿ ಕಣ್ಣಿನ ಹುಡುಗಿ ಈಗ ಹೇಗಿದ್ದಾಳೆ ಗೊತ್ತಾ? ಹುಲಿ ಕಣ್ಣಿನ ಸುಂದರಿ ಮತ್ತೆ ವೈರಲ್​! Pappu Devi

ಅಂದು ಇಡೀ ವಿಶ್ವವೇ ಹುಡುಕಾಡಿದ ಹಳದಿ ಕಣ್ಣಿನ ಹುಡುಗಿ ಈಗ ಹೇಗಿದ್ದಾಳೆ ಗೊತ್ತಾ? ( Pappu Devi )
ಅಂದು ಇಡೀ ವಿಶ್ವವೇ ಹುಡುಕಾಡಿದ ಹಳದಿ ಕಣ್ಣಿನ ಹುಡುಗಿ ಈಗ ಹೇಗಿದ್ದಾಳೆ ಗೊತ್ತಾ? ( Pappu Devi )
Published on

ಪ್ರಮುಖ ಮುಖ್ಯಾಂಶಗಳು

  • ಸುಮಾರು ಎರಡು ದಶಕಗಳ ಹಿಂದೆ ಪುಷ್ಕರ್ ಜಾತ್ರೆಯ ಗದ್ದಲದ ನಡುವೆ ತೆಗೆದ ಫೋಟೋ ಎಲ್ಲರನ್ನು ಬೆರಗುಗೊಳಿಸಿತ್ತು
  • ಸಾಮಾಜಿಕ ಜಾಲತಾಣ ಮತ್ತು ಸ್ಮಾರ್ಟ್‌ಫೋನ್‌ಗಳು ಜಗತ್ತನ್ನು ಆಕ್ರಮಿಸಿಕೊಳ್ಳುವುದಕ್ಕೂ ಮುನ್ನವೇ ತೆಗೆದ ಚಿತ್ರವಾಗಿತ್ತು
  • ಆ ಫೋಟೋ ತೀವ್ರವಾದ ಹಳದಿ-ಹಸಿರು ಕಣ್ಣುಗಳನ್ನು ಹೊಂದಿರುವ ರಾಜಸ್ಥಾನದ ಹುಡುಗಿಯದ್ದಾಗಿತ್ತು
Pappu Devi : ಸುಮಾರು ಎರಡು ದಶಕಗಳ ಹಿಂದೆ ಪುಷ್ಕರ್ ಜಾತ್ರೆಯ ಗದ್ದಲದ ನಡುವೆ ತೆಗೆದ ಚಿತ್ರವೊಂದು ಇಂದಿಗೂ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಸಾಮಾಜಿಕ ಜಾಲತಾಣ ಮತ್ತು ಸ್ಮಾರ್ಟ್‌ಫೋನ್‌ಗಳು ಜಗತ್ತನ್ನು ಆಕ್ರಮಿಸಿಕೊಳ್ಳುವುದಕ್ಕೂ ಮುನ್ನವೇ ತೆಗೆದ ಆ ಒಂದು ಚಿತ್ರವು ಪ್ರಪಂಚದಾದ್ಯಂತ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿತ್ತು.
ಪುಷ್ಕರ್‌ನ ಧೂಳಿನ ಜಾತ್ರೆಯಿಂದ ವಿದೇಶಿಯೊಬ್ಬ ಈ ಚಿತ್ರವನ್ನು ತೆಗೆದಿದ್ದ. ಆ ಫೋಟೋ ತೀವ್ರವಾದ ಹಳದಿ-ಹಸಿರು ಕಣ್ಣುಗಳನ್ನು ಹೊಂದಿರುವ ಹುಡುಗಿಯದ್ದಾಗಿತ್ತು. ಆ ಹುಡುಗಿಯ ಕಣ್ಣು ಹುಲಿಯ ಕಣ್ಣುಗಳಂತೆ ಇದ್ದವು. ಎರಡು ದಶಕಗಳ ಹಿಂದೆ ಹುಡುಗಿಯ ಫೋಟೋ ಪೋಸ್ಟ್‌ಕಾರ್ಡ್‌ಗಳು ಮತ್ತು ಸ್ಮಾರಕಗಳಲ್ಲಿ ರಾರಾಜಿಸಿದ್ದವು. ಅನೇಕ ಪತ್ರಿಕೆಗಳಲ್ಲೂ ಕಾಣಸಿಕೊಂಡಿತ್ತು. ಎರಡು ದಶಕಗಳ ನಂತರ, ಆ ಹಳದಿ ಕಣ್ಣಿನ ಸುಂದರಿ ಎಲ್ಲಿದ್ದಾಳೆ ಎಂದು ಹುಡುಕಾಡಿದಾಗ ಪುಷ್ಕರ್‌ನ ರಸ್ತೆಬದಿಯ ಅಂಗಡಿವೊಂದಕ್ಕೆ ಕರೆದೊಯ್ಯುತ್ತದೆ.
ಅಂದಹಾಗೆ, ಹಳದಿ ಕಣ್ಣಿನ ಸುಂದರಿ ಹೆಸರು ಪಪ್ಪು ದೇವಿ. ಎರಡು ದಶಕಗಳ ಹಿಂದೆ ಪುಷ್ಕರ್ ಜಾತ್ರೆಯ ಸಮಯದಲ್ಲಿ ಪಪ್ಪು ದೇವಿ ಹೆಸರಿನ ಹುಡುಗಿ ಬೀದಿಬದಿಯ ವ್ಯಾಪಾರಿಯಾಗಿದ್ದಳು. ಈ ಸಂದರ್ಭದಲ್ಲಿ ವಿದೇಶಿ ಛಾಯಾಗ್ರಾಹಕನೊಬ್ಬ ಸೆರೆಹಿಡಿದ ಅವಳ ಅಸಾಧಾರಣ ಕಣ್ಣುಗಳ ಒಂದೇ ಒಂದು ಫೋಟೋ, ಪಪ್ಪು ದೇವಿಯನ್ನು ರಾಜಸ್ಥಾನದ ಪ್ರವಾಸಿ ಐಕಾನ್ ಆಗಿ ಪರಿವರ್ತಿಸಿತು. ತನ್ನ ಕಣ್ಣುಗಳು ಇಡೀ ಜಗತ್ತನ್ನೇ ಬೆರಗುಗೊಳಿಸುತ್ತವೆ ಎಂದು ಆ ಹುಡುಗಿಗೂ ತಿಳಿದಿರಲಿಲ್ಲ.

ಮತ್ತೆ ಪಪ್ಪು ದೇವಿ ವೈರಲ್​

ಅದೇ ಪಪ್ಪು ದೇವಿ ಇಂದು ಪುಷ್ಕರ್‌ನಲ್ಲಿ ತನ್ನದೇ ಆದ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ತಾನು ಮಾರಾಟ ಮಾಡುವ ವಸ್ತುಗಳಲ್ಲಿ ತನ್ನ ಹಳೆಯ ಚಿತ್ರವಿರುವ ಪೋಸ್ಟ್‌ಕಾರ್ಡ್‌ಗಳಿವೆ. ಈ ಹಳೆಯ ಪೋಸ್ಟ್‌ಕಾರ್ಡ್ ಸುಂದರಿ, ತನ್ನ ಕೈಯಿಂದ ಹೊಲಿಯಲಾದ ಬಂಜಾರ ಶೈಲಿಯ ಚೀಲಗಳನ್ನು ಮಾರಾಟ ಮಾಡುತ್ತಿದ್ದಾಳೆ. ಅದನ್ನು ಖರೀದಿಸಲು ಬರುವ ವಿದೇಶಿಯರ ಮುಂದೆ ಇನ್ನೂ ಅದೇ ಕಣ್ಣುಗಳೊಂದಿಗೆ ದರ್ಶನ ನೀಡುತ್ತಾಳೆ. ಆಕೆಯನ್ನು ನೋಡಿ ಬೆರಗಾಗುವ ಅನೇಕ ಮಂದಿ, ನಿನ್ನ ಬಳಿ ಕಾಂಟ್ಯಾಕ್ಟ್ ಲೆನ್ಸ್‌ಗಳಿವೆಯೇ ಎಂದು ಆಶ್ಚರ್ಯದಿಂದ ಪ್ರಶ್ನಿಸುತ್ತಾರೆ. ಈ ವೇಳೆ ಪಪ್ಪು ದೇವಿ ನಗುತ್ತಾ ಇದು ಹುಟ್ಟಿನಿಂದಲೇ ಬಂದ ಕಣ್ಣುಗಳು ಎಂದು ಉತ್ತರಿಸುತ್ತಾಳೆ.

ಮೂವರು ಹೆಣ್ಣು ಮಕ್ಕಳು

ಪಪ್ಪು ದೇವಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಅವರಲ್ಲಿ ಇಬ್ಬರು ತಮ್ಮ ತಾಯಿಯಂತೆಯೇ ಹಳದಿ ಕಣ್ಣುಗಳನ್ನು ಹೊಂದಿದ್ದಾರೆ. ಅವರು ಅಂಗಡಿಯಲ್ಲಿನ ಮಾರಾಟದ ವೇಳೆ ತಮ್ಮ ತಾಯಿಗೆ ಸಹಾಯ ಮಾಡಲು ಬರುತ್ತಾರೆ. ಪ್ರವಾಸಿಗರು ತಮ್ಮ ಮಕ್ಕಳ ಕಣ್ಣುಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ ಎಂದು ಪಪ್ಪು ದೇವಿ ಹೇಳಿದ್ದಾರೆ. ಅಲ್ಲದೆ, ನನ್ನ ಪತಿ ಸಫಾರಿ ಚಾಲಕ ಎಂದಿದ್ದಾರೆ.
ಪಪ್ಪು ದೇವಿ ಅವರು ತಮ್ಮ ಮಕ್ಕಳೊಂದಿಗೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರೂ ಸಹ, ಇಂದಿಗೂ ಆಕೆಯ 'ಅತೀಂದ್ರಿಯ ಸೌಂದರ್ಯ' ಮಾತ್ರ ನೋಡುಗರ ಹುಬ್ಬೇರಿಸುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net