ಎಥೆನಾಲ್ ಮಿಕ್ಸ್ ಆಗದ ಪೆಟ್ರೋಲ್ ಲೀಟರ್​ಗೆ ಎಷ್ಟಿದೆ? ಸಂಸತ್ತಿನಲ್ಲಿ ಕಂಪ್ಲೀಟ್ ಲೆಕ್ಕಾಚಾರ ಮುಂದಿಟ್ಟ ಸರ್ಕಾರ | E20 Petrol

ಸಂಸತ್ತಿನಲ್ಲಿ ಕಂಪ್ಲೀಟ್ ಲೆಕ್ಕಾಚಾರ ಮುಂದಿಟ್ಟ ಸರ್ಕಾರ
ಸಂಸತ್ತಿನಲ್ಲಿ ಕಂಪ್ಲೀಟ್ ಲೆಕ್ಕಾಚಾರ ಮುಂದಿಟ್ಟ ಸರ್ಕಾರ
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಸಂಪೂರ್ಣ ಪೆಟ್ರೋಲ್ ಬೆಲೆ ಇಳಿಕೆಗೆ ಎಥೆನಾಲ್ ಬ್ಲೆಂಡಿಂಗ್ ಸಾಥ್
  • ಎಥೆನಾಲ್ ರಹಿತ ಪೆಟ್ರೋಲ್ ವೆಚ್ಚದ ಲೆಕ್ಕಾಚಾರ ಬಿಚ್ಚಿಟ್ಟ ಕೇಂದ್ರ ಸರ್ಕಾರ
  • ಎಥೆನಾಲ್ ಮಿಕ್ಸ್ ಆಗದೆ ಹೋದ್ರೆ ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಎಷ್ಟಾಗುತ್ತೆ ಗೊತ್ತಿದ್ಯಾ?
E20 Petrol: ದೇಶದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ 2023ರ ಹಿಂದಿನ ವಾಹನ ಮಾಲೀಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರುತ್ತಿದ್ದಾರೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ಇ20 ಪೆಟ್ರೋಲ್ ವಿರುದ್ಧ ದೊಡ್ಡ ಮಟ್ಟದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ರೋಲ್​ ಮಾಡಿ, ಟೀಕಿಸಲಾಗುತ್ತಿದೆ. ಭಾರಿ ವಿರೋಧಗಳ ನಡುವೆ ಎಥೆನಾಲ್​ ಮಿಕ್ಸ್​ ಆಗದ ಪೆಟ್ರೋಲ್​ ಬೆಲೆ ಎಷ್ಟಿದೆ ಮತ್ತು ಅದರ ಸಂಪೂರ್ಣ ಲೆಕ್ಕಾಚಾರವನ್ನು ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾಪಿಸಿದೆ.

3 ಕೋಟಿ ನಾಲ್ಕು ಚಕ್ರದ ವಾಹನ

ಎಥೆನಾಲ್ ರಹಿತ ಪೆಟ್ರೋಲ್ ಪ್ರತಿ ಲೀಟರ್​ನ ಬೆಲೆ ಎಷ್ಟು ಎಂಬ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿಗೆ ಲಿಖಿತ ಉತ್ತರಿಸಿದ್ದು, 20ರಷ್ಟು ಎಥೆನಾಲ್ ಅನ್ನು ಪೆಟ್ರೋಲ್​ಗೆ ಸೇರಿಸದೇ ಇದ್ದಿದ್ದರೆ ಕ್ಲೀನ್ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 125 ರೂ. ಆಗುತ್ತೆ. ದೇಶದಲ್ಲಿ 23 ಕೋಟಿ ವಾಹನಗಳಿವೆ. ಇವುಗಳಲ್ಲಿ 20 ಕೋಟಿ ದ್ವಿಚಕ್ರ ವಾಹನಗಳು ಮತ್ತು 3 ಕೋಟಿ ನಾಲ್ಕು ಚಕ್ರದ ವಾಹನಗಳಿವೆ. ಇವೆಲ್ಲವೂ ಕಳೆದ ಎರಡೂವರೆ ವರ್ಷಗಳಿಂದ ಇ15 ಅಥವಾ ಇ20 ಪೆಟ್ರೋಲ್‌ನಲ್ಲಿ ಓಡುತ್ತಿವೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಇಂಜಿನ್‌ಗೆ ತೊಂದರೆಯಾಗುತ್ತಿದೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ ಎಂದು ಸರ್ಕಾರ ವಾದಿಸಿದೆ.

1.5 ಕೋಟಿ ವಾಹನಗಳು

ಇದೆಲ್ಲವೂ ಕೇವಲ ಕಟ್ಟುಕಥೆ ಎಂದು ಕೇಂದ್ರ ಸರ್ಕಾರವೂ ತನ್ನ ವಾದವನ್ನು ಸಮರ್ಥಿಸುವ ಕೆಲವು ದಾಖಲೆಗಳನ್ನು ಲೋಕಸಭೆಯಲ್ಲಿ ಮಂಡಿಸಿತು. ಕಾರು ಮತ್ತು ಬೈಕ್ ಕಂಪನಿಗಳ ಸೇವಾ ಕೇಂದ್ರಗಳಿಂದ ತೆಗೆದುಕೊಳ್ಳಲಾದ ಈ ಅಂಕಿ-ಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ 2.84 ಕೋಟಿ ವಾಹನಗಳು ಸೇವೆ ಸಲ್ಲಿಸಿವೆ. ಈ ಪೈಕಿ 1.5 ಕೋಟಿ ವಾಹನಗಳು ಹಳೆಯದ್ದು. ಆ ಕಾರುಗಳು ಮತ್ತು ಬೈಕ್‌ಗಳಲ್ಲಿ ಎಲ್ಲಿಯೂ ಇ20 ಬಳಕೆಯಿಂದಾಗಿ ಯಾವುದೇ ಮೈಲೇಜ್ ಸಮಸ್ಯೆ ಕಂಡುಬಂದಿಲ್ಲ. ಇಂಜಿನ್ ಹಾನಿಯಾಗಿರುವ ಯಾವುದೇ ವರದಿಯೂ ಇಲ್ಲ ಎಂದು ತಿಳಿಸಿದೆ.
ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾದ ಇಂಧನ ಆಮದು ತೊಡಕುಗಳ ಹೊರತಾಗಿಯೂ, ಕೇಂದ್ರ ಸರ್ಕಾರವು ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಮರ್ಥವಾಗಿದೆ. ಎಥೆನಾಲ್ ಬೆರಸುವ ಮೂಲಕ ಪೆಟ್ರೋಲ್ ಆಮದನ್ನು ಸ್ವಲ್ಪ ಮಟ್ಟಿಗೆ ಇಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net