ಚುನಾವಣೆಯಲ್ಲಿ ಡಿಎಂಕೆ ಸೋಲು; ಮಾಜಿ ಸಿಎಂ ಎಂ.ಕೆ.ಸ್ಟಾಲಿನ್​ ನಿವಾಸಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ | Rajinikanth

ಎಂ.ಕೆ.ಸ್ಟಾಲಿನ್ ಭೇಟಿಯಾಗಿರುವ ರಜನಿಕಾಂತ್
ಎಂ.ಕೆ.ಸ್ಟಾಲಿನ್ ಭೇಟಿಯಾಗಿರುವ ರಜನಿಕಾಂತ್
Published on
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆಯ ಸುನಾಮಿಯಿಂದ ಅಧಿಕಾರ ಕಳೆದುಕೊಂಡಿರುವ ಮತ್ತು ಸ್ವತಃ ತಮ್ಮ ಕ್ಷೇತ್ರದಲ್ಲೇ ಸೋತಿರುವ ಎಂ.ಕೆ.ಸ್ಟಾಲಿನ್ ಅವರನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್(Superstar Rajinikanth) ಚೆನ್ನೈನ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಡಿಎಂಕೆ ಸೋಲಿನ ಬೆನ್ನಲ್ಲೇ ಎಂಕೆ ಸ್ಟಾಲಿನ್​ ಅವರನ್ನು ಖುದ್ದಾಗಿ ಭೇಟಿಯಾಗಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ಸ್ಟಾಲಿನ್​ಗೆ ರಜನಿಕಾಂತ್ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ.
ರಜನಿಕಾಂತ್ ದೀರ್ಘಕಾಲದಿಂದಲೂ ಡಿಎಂಕೆಗೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎನ್ನಲಾಗಿದೆ. 1995 ರಲ್ಲಿ ರಾಜಕೀಯ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬರದೇ ಡಿಎಂಕೆ ಮೈತ್ರಿಕೂಟವನ್ನು ಬೆಂಬಲಿಸಿದರು ಮತ್ತು ಅದಕ್ಕಾಗಿ ಪ್ರಚಾರ ಮಾಡಿದರು. ಅದೇ ರೀತಿ 1998 ರ ಲೋಕಸಭಾ ಚುನಾವಣೆಯಲ್ಲಿಯೂ ಬೆಂಬಲಿಸಿದ್ದಾರೆ.
2017ರಲ್ಲಿ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದ ರಜನಿಕಾಂತ್, 2021ರಲ್ಲಿ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಹಿಂದೆ ಸರಿದರು. ಬಳಿಕ ಡಿಎಂಕೆಗೆ ಬೆಂಬಲ ನೀಡಿದ್ದರು. ಇನ್ನೂ ಈ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಿರುವ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆದ್ದಿದೆ.
59 ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿರುವ ಡಿಎಂಕೆ ಪ್ರಮುಖ ವಿಪಕ್ಷವಾಗಿದೆ. ಸ್ಟಾಲಿನ್ ಅವರು ಗೆಲ್ಲದ ಕಾರಣ ಡಿಎಂಕೆ ಶಾಸಕಾಂಗ ಸಭೆಯ ನಾಯಕನಾಗಿ ಅವರ ಪುತ್ರ ಮತ್ತು ಮಾಜಿ ಡಿಸಿಎಂ ಉದಯನಿಧಿ ಚೆಪಾಕ್​ನಿಂದ ಗೆಲುವು ಸಾಧಿಸಿದ್ದು, ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಯಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net