ಉತ್ತರ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಮನೆಕೆಲಸವೇ ಗತಿ...ವಿವಾದದ ಕಿಡಿ ಹೊತ್ತಿಸಿದ ದಯಾನಿಧಿ ಮಾರನ್ ಹೇಳಿಕೆ | Dayanidhi Maran

Dayanidhi Maran |  ಡಿಎಂಕೆ ಸಂಸದ ದಯಾನಿಧಿ ಮಾರನ್
Dayanidhi Maran | ಡಿಎಂಕೆ ಸಂಸದ ದಯಾನಿಧಿ ಮಾರನ್
Published on
ಚೆನ್ನೈ: ಉತ್ತರ ಭಾರತದ ಹೆಣ್ಣುಮಕ್ಕಳ ಬಗ್ಗೆ ಡಿಎಂಕೆ ಸಂಸದ ದಯಾನಿಧಿ ಮಾರನ್ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಹಲವಾರು ಉತ್ತರ ರಾಜ್ಯಗಳಲ್ಲಿ ಹುಡುಗಿಯರು ಮನೆಯಲ್ಲಿಯೇ ಇದ್ದು ಮನೆಕೆಲಸದತ್ತ ಗಮನಹರಿಸುವಂತೆ ಹೇಳಲಾಗುತ್ತದೆ ಎಂದಿದ್ದರು.
ಮಂಗಳವಾರ (ಜ.13) ಚೆನ್ನೈನ ಕ್ವಾಯ್ದ್-ಇ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾರನ್, ನಮ್ಮ ಸರ್ಕಾರ ವಿತರಿಸಿದ ಲ್ಯಾಪ್‌ಟಾಪ್‌ಗಳನ್ನು ಫಲಾನುಭವಿಗಳು ಅಧ್ಯಯನ ಮಾಡಲು ಮತ್ತು ಸಂದರ್ಶನಗಳನ್ನು ನೀಡಲು ಬಳಸುತ್ತಾರೆ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ತಮಿಳುನಾಡಿನಲ್ಲಿ ನಾವು ನಿಮ್ಮನ್ನು ಅಧ್ಯಯನ ಮಾಡಲು ಕೇಳಲು ಇದೇ ಕಾರಣ ಎಂದರು.
ಮಾತು ಮುಂದುವರೆಸಿದ ಸಂಸದ ಮಾರನ್​, ಉತ್ತರ ಭಾರತದ ರಾಜ್ಯಗಳಲ್ಲಿ ಮಹಿಳೆಯರಿಗೆ ಮನೆಯೊಳಗೆ ಇರಲು, ಅಡುಗೆಮನೆಯಲ್ಲಿ ಕೆಲಸ ಮಾಡಲು ಮತ್ತು ಮಕ್ಕಳಿಗೆ ಜನ್ಮ ನೀಡಲು ಹೇಳಲಾಗುತ್ತದೆ. ಆದರೆ ತಮಿಳುನಾಡು ದ್ರಾವಿಡ ರಾಜ್ಯವಾಗಿದ್ದು, ಅಲ್ಲಿ ನಿಮ್ಮ ಉನ್ನತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ತಮಿಳುನಾಡು ಸರ್ಕಾರ ಮಹಿಳೆಯರು ತಮ್ಮ ಮನೆಗಳ ಹೊರಗೆ ಕೆಲಸ ಮಾಡಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಬೆಂಬಲ ನೀಡುತ್ತದೆ ಎಂದು ಚೆನ್ನೈ ಸೆಂಟ್ರಲ್ ಲೋಕಸಭಾ ಸಂಸದ ಮಾರನ್​ ಹೇಳಿದ್ದಾರೆ.

ಸಿಎಂ ಸ್ಟಾಲಿನ್ ಬೆನ್ನು ತಟ್ಟಿದ ಮಾರನ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​​ರನ್ನು ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಶ್ಲಾಘಿಸಿದ ಮಾರನ್, ತಮಿಳುನಾಡು ದೇಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯ ಎಂದು ಬಣ್ಣಿಸಿದರು. ಸಮಾಜ ಸುಧಾರಕ ಪೆರಿಯಾರ್ ಅವರ ವಿಚಾರಗಳಲ್ಲಿ ಬೇರೂರಿರುವ ದ್ರಾವಿಡ ಮಾದರಿ ಆಡಳಿತವು ಮಹಿಳೆಯರಿಗೆ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಗೆ ನಿರಂತರವಾಗಿ ಆದ್ಯತೆ ನೀಡಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭಾಗವಹಿಸಿದ್ದು, ರಾಜ್ಯ ಸರ್ಕಾರದ ಉಲಗಂ ಉಂಗಲ್ ಕೈಯಿಲ್ ಯೋಜನೆಯಡಿ 900 ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು, ಇದು ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಬಳಕೆ ಮತ್ತು ಉದ್ಯೋಗಾವಕಾಶವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net