5 ಸಲ ಸಂಚಾರ ಉಲ್ಲಂಘನೆ ಮಾಡಿದ್ರೆ ಡಿಎಲ್ ರದ್ದು | DL

DL
DL
Published on
ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸುವುದನ್ನು ಚಾಳಿ ಮಾಡಿಕೊಂಡಿ ರುವವರಿಗೆ ಮೂಗುದಾರ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಒಂದು ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನೇ(DL) ರದ್ದು ಮಾಡಲು ನಿರ್ಧರಿಸಿದೆ.
ಕೇಂದ್ರೀಯ ಮೋಟಾರು ವಾಹನಗಳ ನಿಯಮಗಳಿಗೆ ಮಾಡಿರುವ ಇತ್ತೀಚಿನ ತಿದ್ದುಪಡಿಗಳನ್ವಯ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಂಥ (ಆರ್​ಟಿಒ) ಸಕ್ಷಮ ಪ್ರಾಧಿಕಾರಿಗಳು ಲೈಸೆನ್ಸ್ ರದ್ದು ಅವಧಿಯನ್ನು ನಿರ್ಧರಿಸಲಿ ದ್ದಾರೆ. ಲೈಸೆನ್ಸ್ ರದ್ದುಗೊಳಿಸುವ ಆದೇಶ ಹೊರಡಿಸುವುದಕ್ಕೂ ಮುನ್ನ ಸಂಬಂಧಿತ ಅಧಿಕಾರಿಗಳು ಚಾಲಕರ ಅಹವಾಲನ್ನು ಆಲಿಸಬೇಕಾಗುತ್ತದೆ.
ಹೊಸ ವರ್ಷದಿಂದ ಲೆಕ್ಕಕ್ಕೆ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬುಧವಾರ ಈ ತಿದ್ದುಪಡಿ ಸಂಬಂಧದ ಅಧಿಸೂಚನೆ ಹೊರಡಿಸಿದೆ. ಜ.20ರಿಂದಲೇ ಈ ನಿಯಮ ಜಾರಿಗೆ ಬಂದಿವೆ. ಆದರೆ, ಈ ವರ್ಷದ ಜನವರಿ 1 ಅಥವಾ ನಂತರ ಎಸಗಲಾದ ಉಲ್ಲಂಘನೆಯ ಅಪರಾಧಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದೆಂದು ಅಧಿಸೂಚನೆ ಸ್ಪಷ್ಟಪಡಿಸಿದೆ. ಹಿಂದಿನ ವರ್ಷದ ಉಲ್ಲಂಘನೆಯನ್ನು ಪರಿಗಣಿಸಲಾಗುವುದಿಲ್ಲ ಎಂದೂ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net