

ಪ್ರಮುಖ ಮುಖ್ಯಾಂಶಗಳು
ಡೆಹರಾಡೂನ್: ಗುಡ್ಡಗಾಡುಪ್ರದೇಶಗಳಲ್ಲಿ ವಾಸಿಸುವ ಜನಪದೀಯರಹಬ್ಬಗಳು ನಮ್ಮ ಸಂಸ್ಕೃತಿಯಹೆಮ್ಮೆಯಾಗಿದ್ದು ಅವುಗಳನ್ನುಸಂರಕ್ಷಿಸಿ,ಪ್ರೋತ್ಸಾಹಿಸಲುನಾವು ಬದ್ಧವಾಗಿದ್ದೇವೆ ಎಂದುಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ಧಾಮಿ ಹೇಳಿದ್ದಾರೆ.
ತಮ್ಮನಿವಾಸದಲ್ಲಿ ದೇವಭೂಮಿಯ ಜಾನಪದಸಂಪ್ರದಾಯಗಳಿಗೆ ಮೀಸಲಾಗಿರುವದೀಪಾವಳಿ ಇಗಾಸ್ ಹಬ್ಬವನ್ನುಸಾಂಪ್ರದಾಯಿಕ ಭಕ್ತಿ ಮತ್ತುಸಾಂಸ್ಕೃತಿಕ ಹೆಮ್ಮೆಯಿಂದ ಆಚರಿಸಿಮಾತನಾಡಿದ ಅವರು,ಉತ್ತರಾಖಂಡದಜನತೆಗೆ ಹಬ್ಬದ ಶುಭಾಶಯಗಳನ್ನುಕೋರಿದರು.
ನಮ್ಮಜಾನಪದ ಸಂಸ್ಕೃತಿ ಮತ್ತು ಸಂಪ್ರದಾಯಗಳುನಮ್ಮ ಶ್ರೇಷ್ಠ ಪರಂಪರೆ.ಅವುಗಳನ್ನುಸಂರಕ್ಷಿಸುವುದು ಮತ್ತು ಭವಿಷ್ಯದಪೀಳಿಗೆಗೆ ರವಾನಿಸುವುದು ನಮ್ಮೆಲ್ಲರಸಾಮೂಹಿಕ ಜವಾಬ್ದಾರಿ.ಇಗಾಸ್ ಕೇವಲಒಂದು ಹಬ್ಬವಲ್ಲ,ಸಾಮೂಹಿಕ ಏಕತೆ,ಪ್ರಕೃತಿಯ ಬಗೆಗಿನಕೃತಜ್ಞತೆ ಮತ್ತು ಸಾಂಸ್ಕೃತಿಕಹೆಮ್ಮೆಯ ಸಂಕೇತವಾಗಿದೆ.ನಮ್ಮ ಜಾನಪದಸಂಸ್ಕೃತಿ ಅನಾವರಣದಿಂದ ದೇವಭೂಮಿಯೇನಗುತ್ತಿರುವಂತೆ ಭಾಸವಾಗುತ್ತದೆಎಂದು ಧಾಮಿ ಬಣ್ಣಿಸಿದರು.ಇದೇ ವೇಳೆಉತ್ಸವದಲ್ಲಿ ಪಾಲ್ಗೊಂಡಿದ್ದಎಲ್ಲಾ ಕಲಾವಿದರ ಗೌರವಿಸಿದರು.
ಕಾರ್ಯಕ್ರಮದಲ್ಲಿರಾಜ್ಯಪಾಲ ಲೆಫ್ಟಿನೆಂಟ್ ಜನರಲ್ಗುರ್ಮಿತ್ ಸಿಂಗ್ ಮುಖ್ಯ ಅತಿಥಿಯಾಗಿಭಾಗವಹಿಸಿದ್ದರು.ಸಚಿವರಾದ ಸತ್ಪಾಲ್ಮಹಾರಾಜ್, ಗಣೇಶ್ಜೋಶಿ, ಮಾಜಿಸಿಎಂ ಭಗತ್ ಸಿಂಗ್ ಕೋಶ್ಯಾರಿ,ರಮೇಶ್ ಪೋಖ್ರಿಯಾಲ್,ವಿವಿಧ ಅಧಿಕಾರಿಗಳು,ಸಾರ್ವಜನಿಕಪ್ರತಿನಿಧಿಗಳು ಪಾಲ್ಗೊಂಡಿದ್ದರು. ಉತ್ತರಾಖಂಡದವಿವಿಧ ಪ್ರದೇಶಗಳ ಪ್ರಸಿದ್ಧಜಾನಪದ ಕಲಾವಿದರು,ಗಾಯಕರು ಮತ್ತುಸಾಂಸ್ಕೃತಿಕ ತಂಡಗಳು ಸಾಂಪ್ರದಾಯಿಕಹಾಡು, ನೃತ್ಯಗಳಮೂಲಕ ಹಬ್ಬದ ಸಂಭ್ರಮವನ್ನುಹೆಚ್ಚಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ದಶಕವು ದೇವಭೂಮಿ ಉತ್ತರಾಖಂಡಕ್ಕೆ ವಿಶೇಷ ದಿನಗಳಾಗಿರುತ್ತವೆ ಎಂಬ ಮಾತು ಈ ಪವಿತ್ರ ಭೂಮಿಯ ಉಜ್ವಲ ಭವಿಷ್ಯದ ಪ್ರತಿಜ್ಞೆಯಾಗಿದೆ. ಪ್ರಧಾನಿಯವರ ವಿಶ್ವಾಸವನ್ನು ಸಮರ್ಪಕವಾಗಿ ಸಾಕಾರಗೊಳಿಸಬೇಕಿದೆ.