ಡಿವೋರ್ಸ್ ವಿಚಾರ; ದಳಪತಿ ವಿಜಯ್ ಮನೆಯಲ್ಲಿರಲು ಅವಕಾಶ ನೀಡಲು ನಿರ್ದೇಶನ ಕೋರಿ ಪತ್ನಿ ಸಂಗೀತಾ ಮತ್ತೊಂದು ಅರ್ಜಿ | Thalapathy Vijay

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್
ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್
Published on
ಚೆನ್ನೈ: ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ, ಇತ್ತೀಚಿಗೆ ವಿಚ್ಚೇದನ ಕೋರಿ ಚೆನ್ನೈನ ಚೆಂಗಲ್ಪಟ್ಟು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇಂದು(ಮಾ. 07) ಮತ್ತೆ ಪ್ರಕರಣ ಇತ್ಯರ್ಥವಾಗುವವರೆಗೂ ಪತಿ ಮನೆಯಲ್ಲಿರಲು ಅಥವಾ ಅಂಥದ್ದೆ ಪರ್ಯಾಯ ಮನೆಯನ್ನು ಒದಗಿಸಲು ವಿಜಯ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಪತ್ನಿ ಸಂಗೀತಾ ಶನಿವಾರ ಸಲ್ಲಿಸಿರುವ ಹೊಸ ಅರ್ಜಿಯಲ್ಲಿ, ವಿಜಯ್ ಜೊತೆಗಿನ ದಾಂಪತ್ಯದ ಉದ್ದಕ್ಕೂ ಕುಟುಂಬದ ಯೋಗಕ್ಷೇಮಕ್ಕೆ ಆದ್ಯತೆ ನೀಡಿದ್ದೇನೆ. ಮನೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಮೂಲಕ ಸಮರ್ಪಿತ ಗೃಹಿಣಿ ಮತ್ತು ಸಂಗಾತಿಯಾಗಿ ಕರ್ತವ್ಯವನ್ನು ಪೂರೈಸಿದ್ದೇನೆ. ಇತ್ತೀಚೆಗೆ ನಾನು ಬ್ರಿಟಿಷ್ ಪೌರತ್ವವನ್ನು ಹೊಂದಿದ್ದು, ಲಂಡನ್​ನಲ್ಲಿ ವಾಸಿಸುತ್ತಿದ್ದೇನೆ.
ಚೆನ್ನೈನಲ್ಲಿ ವಾಸಿಸಲು ನನಗೆ ಮನೆ ಇಲ್ಲ, ವಿಚ್ಛೇದನ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಪ್ರಸ್ತುತ ವೈವಾಹಿಕ ನಿವಾಸದಲ್ಲಿ ಉಳಿಯಲು ಅವಕಾಶ ನೀಡುವಂತೆ ಅಥವಾ ಅಂತಹುದ್ದೇ ಪರ್ಯಾಯ ವ್ಯವಸ್ಥೆ ಒದಗಿಸಲು ವಿಜಯ್ ಅವರಿಗೆ ನಿರ್ದೇಶನ ನೀಡಲು ಮಧ್ಯಂತರ ಆದೇಶ ಹೊರಡಿಸುವಂತೆ ಕೋರಿದ್ದಾರೆ.
ನಟ ವಿಜಯ್​ ಮತ್ತು ಸಂಗೀತಾ ಮದುವೆಯಾಗಿ 27 ವರ್ಷ ಸಂಸಾರವನ್ನು ನಡೆಸಿದ್ದು, ಫೆ. 27ರಂದು ಇಬ್ಬರ ನಡುವೆ ಭಿನ್ನಾಭಿಪ್ರಾಯ ಮತ್ತು ಇತರೆ ನಟಿಯೊಂದಿಗೆ ಅಫೇರ್ ಆರೋಪ ಹೊರಿಸಿ ಸಂಗೀತಾ ವಿಚ್ಚೇದನಕ್ಕೆ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವಿಜಯ್ 2021ರಲ್ಲಿ ಇತರೆ ನಟಿಯೊಂದಿಗೆ ಅನೈತಿಕ ಸಂಬಂಧದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಏ. 20ರಂದು ಅರ್ಜಿಯ ವಿಚಾರಣೆ ನಡೆಯಲಿದ್ದು, ನಟ ವಿಜಯ್​ಗೆ ಹಾಜರಾಗುವಂತೆ ನೋಟಿಸ್ ನೀಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net