_1772647904987.webp?w=480&auto=format%2Ccompress&fit=max)
_1772647904987.webp?w=480&auto=format%2Ccompress&fit=max)
ಮುಂಬೈ: ಸಂಗಾತಿಗೆ ತನ್ನ ವಾದ ಮಂಡಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೆ ಕೇವಲ ವಾಟ್ಸಾಪ್ ಚಾಟ್ಗಳ ಆಧಾರದಲ್ಲಿ ಕ್ರೌರ್ಯದ ಆರೋಪ ಹೊರಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೊರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರ ಪೀಠ ಕಳೆದ ವಾರ ನಾಸಿಕ್ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ತಾವು ನಾಸಿಕ್ನಿಂದ ಪುಣೆಗೆ ಸ್ಥಳಾಂತರಗೊಂಡು ಪ್ರತ್ಯೇಕವಾಗಿ ವಾಸಿಸಬೇಕು ಎಂದು ಒತ್ತಾಯಿಸಿದ್ದರು ಮತ್ತು ತನ್ನ ಅತ್ತೆ ಹಾಗೂ ನಾದಿನಿಯ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ್ದರು.
ವಾಟ್ಸಾಪ್ ಚಾಟ್ ನಲ್ಲಿ ಒತ್ತಡದ ತಂತ್ರಗಳು, ಭಾವನಾತ್ಮಕ ಬ್ಲಾಕ್ವೆುೕಲ್ ಮತ್ತು ಅಸಭ್ಯ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪ ಮಾಡಿದ್ದರು. ವ್ಯಕ್ತಿಯ ಆರೋಪವನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೊರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಕೇವಲ ವಾಟ್ಸಾಪ್ ಚಾಟ್ ಆಧರಿಸಿ ವಿಚ್ಛೇದನ ಆದೇಶ ನೀಡಲು ಸಾಧ್ಯವಿಲ್ಲ. ಏಕೆಂದರೆ ಅದನ್ನು ಸಾಕ್ಷ್ಯಗಳಾಗಿ ನೀಡುವ ಮೂಲಕ ಸಾಬೀತುಪಡಿಸಲಾಗಿಲ್ಲ ಎಂದು ತಿಳಿಸಿದೆ.