ಕೊಲೆಯಾದ ಪ್ರೊಫೆಸರ್‌ಗೆ ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಒಂದು ತಾತ-ಮುತ್ತಜ್ಜನ ಕಾಲದ ಆಸ್ತಿ (ಮನೆ) ಇತ್ತು. ಈ ಮನೆಯನ್ನು ಅವರು 2023 ರಲ್ಲಿ ಬಂಗಾಳದ ಈ ದಂಪತಿಗೆ(ಆರೋಪಿತ ದಂಪತಿ) ತಿಂಗಳಿಗೆ 10,000 ರೂಪಾಯಿ ಬಾಡಿಗೆಗೆ ನೀಡಿದ್ದರು. ವರ್ಷದ ಹಿಂದೆ ಈ ದಂಪತಿ ಆ ಮನೆಯನ್ನು ತಮಗೆ ಮಾರಿಬಿಡುವಂತೆ ಪ್ರೊಫೆಸರ್‌ಗೆ ಕೇಳಿದ್ದರು. ಆದರೆ, ಅದು ತನ್ನ ಅಜ್ಜಿಯ ನೆನಪಿನ ಮನೆ, ನಾನು ಮಾರುವುದಿಲ್ಲ ಎಂದು ಪ್ರೊಫೆಸರ್ ನಿರಾಕರಿಸಿದ್ದಲ್ಲದೆ, ಮನೆ ಖಾಲಿ ಮಾಡುವಂತೆ ಹೇಳಿದ್ದರು.