ಶ್ರೀಲಂಕಾ: ಬಂಗಾಳಕೊಲ್ಲಿಯಲ್ಲಿ ದ್ವಿಗುಣಗೊಂಡಿರುವ ದಿತ್ವಾ ಚಂಡಮಾರುತ ಇದೀಗ ಕರಾವಳಿಯನ್ನು ಬಹಳ ವೇಗವಾಗಿ ಸಮೀಪಿಸುತ್ತಿದೆ. ಈಗಾಗಲೇ ಶ್ರೀಲಂಕಾ ಸೈಕ್ಲೋನ್ ಹೊಡೆತಕ್ಕೆ ಅಕ್ಷರಶಃ ತತ್ತರಿಸಿದ್ದು, ಕನಿಷ್ಠ 390ಕ್ಕೂ ಅಧಿಕ ಮಂದಿ ಉಸಿರು ಚೆಲ್ಲಿದ್ದಾರೆ. ಹಲವರು ಸುಳಿವು ಸಿಗದಂತೆ ನಾಪತ್ತೆಯಾಗಿದ್ದಾರೆ.
ಪ್ರಸ್ತುತ, ಚಂಡಮಾರುತ ಅಲೆಯು ಚೆನ್ನೈನಿಂದ ಪೂರ್ವಕ್ಕೆ ಕೇವಲ 50 ಕಿ.ಮೀ ಮತ್ತು ಕಡಲಾಚೆಯ 35 ಕಿ.ಮೀ ದೂರದಲ್ಲಿ ಚಲಿಸುತ್ತಿದೆ. ಇದು ಮಧ್ಯರಾತ್ರಿಯ ವೇಳೆಗೆ ಕರಾವಳಿಗೆ ಸಮೀಪಿಸಿ, ಸುಮಾರು 30 ಕಿ.ಮೀ ದೂರವನ್ನು ತಲುಪಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆ ಇಂದು ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆಗಳು ಲಭಿಸಿವೆ. ಕೆಲವು ಸ್ಥಳಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ.
ಆಂಧ್ರಪ್ರದೇಶದ ಪ್ರಕಾಶಂ, ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಲಿದ್ದು, ಕಾಕಿನಾಡ, ಕೊನಸೀಮಾ, ಪೂರ್ವ ಮತ್ತು ಪಶ್ಚಿಮ ಗೋದಾವರಿ, ಎಲೂರು, ಕೃಷ್ಣ, ಎನ್‌ಟಿಆರ್, ಗುಂಟೂರು, ಬಾಪಟ್ಲ, ಪಲ್ನಾಡು ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಮುಂದುವರಿದ ಕೊರೆಯುವ ಚಳಿ
ದಿತ್ವಾ ಚಂಡಮಾರುತ ಎಫೆಕ್ಟ್ ತೀವ್ರವಾಗಿರುವ ಕಾರಣ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇತರ ಕೆಲವು ಪ್ರದೇಶಗಳಲ್ಲಿ, ಮಧ್ಯಮ ಮಳೆಯಾಗಲಿದೆ. ರೈತರು, ಮೀನುಗಾರರು ಮತ್ತು ಕರಾವಳಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನು ದಿತ್ವಾ ಎಫೆಕ್ಟ್ ರಾಜ್ಯ ರಾಜಧಾನಿಗೂ ತಟ್ಟಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮೈಕೊರೆಯುವ ಚಳಿ ಕಾಡುತ್ತಿದೆ,(ಏಜೆನ್ಸೀಸ್).