ಎನ್​ಸಿಪಿ ಬಣಗಳ ವಿಲೀನ ಚರ್ಚೆ; ಬಿಜೆಪಿಗೆ ತಿಳಿಸದೆ ಅಜಿತ್ ಪವಾರ್ ವಿಲೀನಕ್ಕೆ ಸಹಿ ಹಾಕುತ್ತಿದ್ದರೇ?; ಸಿಎಂ ಫಡ್ನವೀಸ್ | CM Fadnavis

ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್
ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್
Published on
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಎನ್​ಸಿಪಿ ಪಕ್ಷದ ವಿಲೀನದ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ, ಈ ಬಗ್ಗೆ ಭಾನುವಾರ(ಫೆ. 01) ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್​ಸಿಪಿ ವಿಲೀನದ ಬಗ್ಗೆ ಚರ್ಚೆ ಅಂತಿಮ ಹಂತದಲ್ಲಿದ್ದೆ, ಅದನ್ನು ದಿವಂಗತ ಅಜಿತ್ ಪವಾರ್ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಶನಿವಾರ ಮಾತನಾಡಿದ್ದ ಎನ್​ಸಿಪಿ(ಎಸ್​ಪಿ) ಮುಖ್ಯಸ್ಥ ಶರದ್ ಪವಾರ್, ಅಜಿತ್ ಪವಾರ್ ಅವರು ಫೆ. 12ರಂದು ಎರಡೂ ಬಣಗಳ ವಿಲೀನದ ಬಗ್ಗೆ ಘೋಷಣೆ ಮಾಡುವವರಿದ್ದರು. ಆದರೆ ಅವರ ಅಕಾಲಿಕ ನಿಧನ ಈಗ ವಿಲೀನಕ್ಕೆ ಅಡಚಣೆ ಮಾಡಬಹುದು ಎಂದಿದ್ದರು. ಮತ್ತು ಜ. 17ರಂದು ಅಜಿತ್ ಪವಾರ್ ಮತ್ತು ಶರದ್ ಪವಾರ್ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಸಿಎಂ ಫಡ್ನವೀಸ್, ದಿವಂಗತ ಅಜಿತ್ ಪವಾರ್ ಅವರು,  ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ನನಗೆ ತಿಳಿದಿಲ್ಲ. ನಮಗೆ ತಿಳಿಸದೇ ವಿಲೀನ ಮಾತುಕತೆಗಳನ್ನು ಅಂತಿಮಗೊಳಿಸಬಹುದೇ?, ಎನ್‌ಸಿಪಿ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವತಂತ್ರ ಪಕ್ಷವಾಗಿದೆ. ಆದರೆ ಬಿಜೆಪಿಯ ಮಿತ್ರಪಕ್ಷವಾಗಿ, ಮುಂದುವರಿಯುವ ಮೊದಲು ಪಕ್ಷದೊಂದಿಗೆ ಸಮಾಲೋಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಒಂದು ವೇಳೆ ವಿಲೀನದ ಕೆಲಸ ಮಾಡುತ್ತಿದ್ದರೆ, ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡುತ್ತಿದ್ದರೇ?, ಸ್ಥಿರವಾಗಿರುವ ಎನ್​ಡಿಎ ತೊರೆಯಲು ತಯಾರಿ ನಡೆಸುತ್ತಿದ್ದರೇ? ಅವರು ಎಲ್ಲಾ ವಿಚಾರವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಪ್ರತಿಪಾದಿಸಿದ್ದಾರೆ.
ಸುನೇತ್ರಾ ಪವಾರ್ ಅವರ ತರಾತುರಿಯ ಪ್ರಮಾಣವಚನದ ಬಗೆಗಿನ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎನ್‌ಸಿಪಿ ಇದಕ್ಕೆ ಉತ್ತರಿಸುತ್ತದೆ. ನಿರ್ಧಾರಗಳು ಹೆಚ್ಚಾಗಿ ಸಂದರ್ಭಗಳಿಂದ ನಡೆಸಲ್ಪಡುತ್ತವೆ. ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಗೂ ಮುಂಚೆಯೇ ರಾಜೀವ್ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net