C.J ರಾಯ್ ಸಾವು ಪ್ರಕರಣಕ್ಕೆ 'ರಾಜಕೀಯ' ಆಯಾಮ! ಕೇಂದ್ರಕ್ಕೆ ಕೇರಳ CM ಪತ್ರ: IT ದಾಳಿ ವೇಳೆ ಲೋಡ್ ಆಗಿದ್ದ ಗನ್ ಸಿಕ್ಕಿದ್ದು ಹೇಗೆ?

CJRoyCase
CJRoyCase
Published on
ಬೆಂಗಳೂರು/ನವದೆಹಲಿ: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್(CJRoyCase ) ಅವರ ಆತ್ಮಹತ್ಯೆ ಪ್ರಕರಣ ಈಗ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಹೌದು. ಇದೇ ಜನವರಿ 30ರಂದು ಬೆಂಗಳೂರಿನಲ್ಲಿ ಐಟಿ ದಾಳಿಯ ವೇಳೆ ನಡೆದ ಈ ಘಟನೆಯನ್ನು "ದೇಶದ ತೆರಿಗೆ ಆಡಳಿತದ ಮೇಲಿನ ಕಳಂಕ" ಎಂದು ಕರೆದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

ಸಿಎಂ ಪತ್ರದಲ್ಲಿನ ಸ್ಫೋಟಕ ಪ್ರಶ್ನೆಗಳು

ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಪಿಣರಾಯಿ ವಿಜಯನ್, ಐಟಿ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಕಚೇರಿಯನ್ನು ಪರಿಶೀಲಿಸುತ್ತಿರುವಾಗ, ಒಬ್ಬ ವ್ಯಕ್ತಿ ಲೋಡ್ ಮಾಡಲಾದ ಪಿಸ್ತೂಲನ್ನು ಎತ್ತಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯವಾಯಿತು? ಇದು ಭದ್ರತಾ ಶಿಷ್ಟಾಚಾರದ ಗಂಭೀರ ಉಲ್ಲಂಘನೆಯಲ್ಲವೇ? ಎಂದಿದ್ದಾರೆ.
ರಾಯ್ ಅವರ ಸಹೋದರ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಸಿಎಂ, ಐಟಿ ಅಧಿಕಾರಿಗಳು ನೀಡಿದ ಮಾನಸಿಕ ಕಿರುಕುಳವೇ ಸಾವಿಗೆ ಕಾರಣ ಎಂದು ಪರೋಕ್ಷವಾಗಿ ದೂರಿದ್ದಾರೆ. ಸಂವಿಧಾನಿಕ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಸಾವು

ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಕೂಡ ಈ ಘಟನೆಯನ್ನು ಖಂಡಿಸಿದ್ದು, "ಉದ್ಯಮಶೀಲತೆ ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸಬೇಕಾದ ಕಾಲದಲ್ಲಿ, ಇಂತಹ ದರ್ಜೆಯ ಉದ್ಯಮಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಇದರ ಹಿಂದೆ ಅಡಗಿರುವ ನೈಜ ಸತ್ಯಾಂಶಗಳನ್ನು ಹೊರಹಾಕಲು ಸ್ವತಂತ್ರ ತನಿಖೆಯ ಅಗತ್ಯವಿದೆ," ಎಂದು ಹೇಳಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net