ಈ ಕಾಯ್ದೆಯಡಿಯಲ್ಲಿ ಗ್ರಾಹಕರಿಗೆ ಪ್ರಮುಖವಾಗಿ ಆರು ಹಕ್ಕುಗಳನ್ನು ನೀಡಲಾಗಿದೆ. ಅಪಾಯಕಾರಿ ಸರಕು ಮತ್ತು ಸೇವೆಗಳ ವಿರುದ್ಧ ರಕ್ಷಣೆ, ಗುಣಮಟ್ಟ ಮತ್ತು ಬೆಲೆಯ ಬಗ್ಗೆ ಮಾಹಿತಿ ಪಡೆಯುವ ಹಕ್ಕು, ಸ್ಪರ್ಧಾತ್ಮಕ ಬೆಲೆಯಲ್ಲಿ ವಿವಿಧ ಉತ್ಪನ್ನಗಳ ಲಭ್ಯತೆ, ಸೂಕ್ತ ವೇದಿಕೆಗಳಲ್ಲಿ ಅಹವಾಲು ಆಲಿಸುವ ಹಕ್ಕು, ಅನುಚಿತ ವ್ಯಾಪಾರ ಪದ್ಧತಿಗಳ ವಿರುದ್ಧ ಪರಿಹಾರ ಕಂಡುಕೊಳ್ಳುವುದು ಮತ್ತು ಗ್ರಾಹಕ ಜಾಗೃತಿ ಪಡೆಯುವ ಹಕ್ಕುಗಳು ಇದರಲ್ಲಿ ಸೇರಿವೆ. ಗ್ರಾಹಕರ ಹಕ್ಕುಗಳನ್ನು ಜಾರಿಗೊಳಿಸಲು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು (ಸಿಸಿಪಿಎ) ಸ್ಥಾಪಿಸಲಾಗಿದ್ದು, ಇದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮತ್ತು ಅನುಚಿತ ವ್ಯಾಪಾರ ಪದ್ಧತಿಗಳ ಬಗ್ಗೆ ಸ್ವಯಂಪ್ರೇರಿತವಾಗಿ ಅಥವಾ ದೂರಿನ ಆಧಾರದಲ್ಲಿ ತನಿಖೆ ನಡೆಸುವ ಅಧಿಕಾರ ಹೊಂದಿದೆ. ಇದಲ್ಲದೆ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗ್ರಾಹಕ ವಿವಾದಗಳ ಪರಿಹಾರ ಆಯೋಗಗಳನ್ನು ರಚಿಸಲಾಗಿದೆ.