2009ರಿಂದಲೂ ಮಮತಾ ಬ್ಯಾನರ್ಜಿ ಅವರ ನೆರಳಿನಂತೆ ಜೊತೆಗಿದ್ದ ಪಕ್ಷದ ಹಿರಿಯ ನಾಯಕಿ ಹಾಗೂ ನಾಲ್ಕು ಬಾರಿಯ ಸಂಸದೆ ಶತಬ್ದಿ ರಾಯ್ ಎನ್ಡಿಟಿವಿ ಜೊತೆ ಮಾತನಾಡುತ್ತಾ, ಮಮತಾ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ದೀದಿ ಬದಲಾಗಿಹೋದರು ಎಂದು ಬೇಸರ ವ್ಯಕ್ತಪಡಿಸಿರುವ ರಾಯ್, ಕಳೆದ ಕೆಲವು ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಅವರ ವರ್ತನೆ ಮತ್ತು ಆಡಳಿತ ಶೈಲಿ ಸಂಪೂರ್ಣ ಬದಲಾಯಿತು. ಅವರೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ ನಿಜ, ಆದರೆ ನನಗೆ ಜನರ ಕೆಲಸ ಮುಖ್ಯ. ಹಾಗಾಗಿಯೇ ನಾನು ಈ ಕಠಿಣ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.