ಹೆಚ್ಚು ಕೆಲ್ಸ ಮಾಡಿದ್ದೇ ಎಡವಟ್ಟಾಯ್ತಾ? ರಜೆ ದಿನ ಕೆಲ್ಸ ಮಾಡಿದ್ದಕ್ಕೆ ಬಾಸ್ ತರಾಟೆ ! ಅಬ್ಬಬ್ಬಾ ಎಂಥಾ ದೇಶ ಮಾರಾಯ್ರೆ..! Work Life Balance
Work Life Balance ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅತಿಯಾಗಿ ಕೆಲಸ ಮಾಡಿದ ಭಾರತೀಯ ಉದ್ಯೋಗಿ ವಿನೋದ್‌ಗೆ ಮ್ಯಾನೇಜರ್ ತರಾಟೆ
ಸ್ಕ್ಯಾಂಡಿನೇವಿಯಾದಲ್ಲಿ ರಜೆ ತೆಗೆದುಕೊಳ್ಳುವುದು ಐಚ್ಛಿಕವಲ್ಲ, ಅದು ನಿಯಮ
ರಜೆ ದಿನ ದುಡಿಯುವುದು ಕಿರಿಯ ಉದ್ಯೋಗಿಗಳಿಗೆ ತಪ್ಪು ಸಂದೇಶ ನೀಡುತ್ತದೆ
Work Life Balance: ಭಾರತದಲ್ಲಿ ಕಾರ್ಪೊರೇಟ್ ವಲಯದ 'ಗಡಿಬಿಡಿ ಸಂಸ್ಕೃತಿ' ಮತ್ತು ಅತಿಯಾದ ಕೆಲಸದ ಸಮಯದ ಕುರಿತು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯೊಂದು ಆರಂಭವಾಗಿದೆ. ಇತ್ತೀಚೆಗಷ್ಟೇ ಭಾರತದಿಂದ ನಾರ್ವೆಗೆ ವಲಸೆ ಹೋದ ವಿನೋದ್ ಎಂಬ ಭಾರತೀಯ ವೃತ್ತಿಪರರೊಬ್ಬರು ಹಂಚಿಕೊಂಡಿರುವ ಅನುಭವವು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಭಾರತ ಮತ್ತು ಸ್ಕ್ಯಾಂಡಿನೇವಿಯನ್ ದೇಶಗಳ ಕೆಲಸದ ಸಂಸ್ಕೃತಿಯ ನಡುವಿನ ತೀವ್ರ ವ್ಯತ್ಯಾಸಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದು, ಇದು ಇಂದಿನ ಯುವ ಪೀಳಿಗೆಯಲ್ಲಿ ನೆಮ್ಮದಿಯ ಜೀವನ ಹಾಗೂ ಕೆಲಸದ ಸಮತೋಲನದ ಬಗ್ಗೆ ಗಂಭೀರ ಪುನರ್ವಿಮರ್ಶೆಗೆ ನಾಂದಿ ಹಾಡಿದೆ.
ಪೋಸ್ಟ್ನಲ್ಲೇನಿದೆ?
ಸಾಮಾಜಿಕ ಜಾಲತಾಣ ಬಳಕೆದಾರ ವಿನೋದ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ, 15 ವರ್ಷಗಳ ಹಿಂದೆ ನಾರ್ವೆಗೆ ಸ್ಥಳಾಂತರಗೊಂಡ ನಂತರ ಭಾರತೀಯ ಕೆಲಸದ ನೀತಿ ಎಂದು ಬಣ್ಣಿಸಿದ್ದ ವರ್ಷಗಳ ವಾರಾಂತ್ಯದಲ್ಲಿ ಕೆಲಸ ಮಾಡುವುದು, ಊಟವನ್ನು ಬಿಟ್ಟುಬಿಡುವುದು, ಕಚೇರಿಯಲ್ಲಿ ಅಧಿಕ ಸಮಯ ಕೆಲಸ ಮಾಡುವುದು ಮತ್ತು ಅನಾರೋಗ್ಯದ ನಡುವೆಯೂ ಕೆಲಸ ಮಾಡುತ್ತಿರುವುದನ್ನು ನೆನೆಪಿಸಿಕೊಂಡಿದ್ದಾರೆ.
ಭಾರತದ ಕಂಪನಿಯಲ್ಲಿ ಅಂತಹ ನಡವಳಿಕೆಯು ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ ಎಂದು ವಿನೋದ್ ಹೇಳಿದ್ದಾರೆ. ಆದಾಗ್ಯೂ, ನಾರ್ವೆಯಲ್ಲಿನ ಆರಂಭಿಕ ದಿನಗಳಲ್ಲಿ ಅವರ ಮ್ಯಾನೇಜರ್ನೊಂದಿಗಿನ ಸಂವಹನವು ಈ ನಂಬಿಕೆಯನ್ನು ಮತ್ತು ಕೆಲಸದ ಜೀವನದ ಸಮತೋಲನದ ಬಗ್ಗೆ ಅವರ ದೃಷ್ಟಿಕೋನವನ್ನು ಬದಲಾಯಿಸಿತು ಎಂದಿದ್ದಾರೆ.
ಪ್ರಶಂಸೆಯ ಬದಲಿಗೆ ಸಿಕ್ಕಿತು ಗಂಭೀರ ಎಚ್ಚರಿಕೆ!
ಆದಾಗ್ಯೂ, ತಮ್ಮ ನಾರ್ವೆ ಕಚೇರಿಯ ದಿನವನ್ನು ನೆನಪಿಸಿಕೊಂಡಿರುವ ವಿನೋದ್, ಕಚೇರಿಯಲ್ಲಿನ ನನ್ನ ಆರಂಭಿಕ ದಿನಗಳಲ್ಲಿ, ಬಾಸ್ ನನಗೆ ಕರೆ ಮಾಡಿದರು. ನನ್ನನ್ನು ಹೊಗಳುತ್ತಾರೆ ಎಂದು ನಾನು ಭಾವಿಸಿದೆ. ಆದರೆ, ವಿನೋದ್ ಅವರ ಬಾಸ್ ಆಫೀಸ್ ರೂಮ್‌ಗೆ ಕರೆದು ಅವರಿಗೆ ಶಾಕ್ ನೀಡಿದರು.
ಬಾಸ್ ಹೇಳಿದ್ದೇನು?
ನೀವು ಶನಿವಾರ ರಜೆ ಇದ್ದರೂ ನನ್ನ ಇಮೇಲ್‌ಗೆ ರಿಪ್ಲೈ ಮಾಡಿದ್ದೀರಿ. ಅಷ್ಟೇ ಅಲ್ಲ, ನನಗೆ ತಿಳಿಸದೆಯೇ ನಿಮ್ಮ ರಜೆಯನ್ನು ಕ್ಯಾನ್ಸಲ್ ಮಾಡಿಕೊಂಡು ಕಂಪನಿಯ ಪ್ರಾಜೆಕ್ಟ್ ಮುಗಿಸಿಕೊಟ್ಟಿದ್ದೀರಿ. ನೀವು ಕಂಪನಿಗೆ ಒಳ್ಳೆಯದಾಗಲಿ ಎಂದೇ ಇದನ್ನು ಮಾಡಿದ್ದೀರಿ ಎಂದು ನನಗೆ ಗೊತ್ತು, ಆದರೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ವಿನೋದ್ ಪ್ರಕಾರ, ಅವರ ನಾರ್ವೇಜಿಯನ್ ಬಾಸ್ ರಜೆ ತೆಗೆದುಕೊಳ್ಳುವುದು ಐಚ್ಛಿಕವಲ್ಲ. ಬದಲಾಗಿ ರಜೆಯ ಸಮಯದಲ್ಲೂ ಕೆಲಸ ಮಾಡುವುದು ಕಿರಿಯ ಉದ್ಯೋಗಿಗಳಿಗೆ ಕೆಟ್ಟ ಪರಿಣಾಮ ಬೀಳುತ್ತದೆ ಎಂದು ಗಮನಸೆಳೆದರು.
ರಜೆ ಕಡ್ಡಾಯ, ಅದನ್ನು ನೀವು ಎಂದಿಗೂ ತಪ್ಪಿಸಿಕೊಳ್ಳಬೇಡಿ. ನಿಮ್ಮ ಕಿರಿಯರು ನಿಮ್ಮನ್ನು ಗಮನಿಸುತ್ತಿರುತ್ತಾರೆ. ಅವರು ನೋಡಿದರೆ, ನಾವು ಯಶಸ್ವಿಯಾಗಬೇಕಾದರೆ ನಮ್ಮ ವೈಯಕ್ತಿಕ ಜೀವನ ಮತ್ತು ರಜೆಗಳನ್ನು ಬಲಿ ಕೊಟ್ಟು ಸದಾ ಕೆಲಸ ಮಾಡಲೇಬೇಕು ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.
ಆದಾಗ್ಯೂ, ಈ ಘಟನೆಯು ನನಗೆ ಗಡಿಬಿಡಿ, ಆತಂಕ ಮತ್ತು ಯಾವಾಗಲೂ ಜಂಜಾಟದಿಂದ ಕೂಡಿರಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು. ಮೊದಲ ಬಾರಿಗೆ ನನಗೆ ಸದ್ದಿಲ್ಲದೆ ನಷ್ಟವನ್ನುಂಟು ಮಾಡಿದ್ದಕ್ಕಾಗಿ ನಾನು ಕಣ್ಣೀರು ಹಾಕಿದೆ ಎಂದು ವಿನೋದ್ ಹಂಚಿಕೊಂಡರು.
ಕೆಲಸದ ಸ್ಥಳ ಸಂಸ್ಕೃತಿಯ ಕುರಿತು ಚರ್ಚೆ
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆಯಿತು. "ಭಾರತದಲ್ಲಿ, ಸಂಜೆ 6 ಗಂಟೆಗೆ ಕಚೇರಿಯಿಂದ ಹೊರಡುವುದು ಅಪರಾಧ ಮಾಡಿದಂತೆ ಭಾಸವಾಗುತ್ತದೆ" ಎಂದು ಫೋರಮ್ ಫಾರ್ ಐಟಿ ಉದ್ಯೋಗಿಗಳ ಎಕ್ಸ್ ಖಾತೆ ಹಂಚಿಕೊಂಡಿದೆ. ಮತ್ತೊಬ್ಬ ಬಳಕೆದಾರ ಭಾರತದಲ್ಲಿ ಕೆಲಸ-ಜೀವನದ ಸಮತೋಲನವು ಒಂದು ಕನಸಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).