ನಟನಾಗಿ ರಾಜಕೀಯ ಪ್ರವೇಶಿಸಿದ ವಿಜಯ್, ಬಡ ವಧುಗಳಿಗೆ ಚಿನ್ನ ಮತ್ತು ಗುಣಮಟ್ಟದ ರೇಷ್ಮೆ ಸೀರೆಗಳು ಮತ್ತು ಮಹಿಳೆಯರು ನಡೆಸುವ ಸ್ವಸಹಾಯ ತಂಡಗಳಿಗೆ (ಎಸ್‌ಎಚ್‌ಜಿ) 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ, ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ, ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು ತಡೆಯಲು, ಸರ್ಕಾರಿ ಹಾಗೂ ರಾಜ್ಯ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಾಯಂದಿರು ಅಥವಾ ಪೋಷಕರಿಗೆ ವಾರ್ಷಿಕವಾಗಿ 15,000 ರೂ. ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.