ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ರಕುಲ್ ಪ್ರೀತ್ ಸಿಂಗ್ ನಿಯಮ ಉಲ್ಲಂಘನೆ?; ಅಸಲಿ ಸತ್ಯ ಬಿಚ್ಚಿಟ್ಟ ಅರಣ್ಯ ಇಲಾಖೆ

Rakul Preet Singh Gir Forest Controversy
Rakul Preet Singh Gir Forest Controversy
Published on

ಪ್ರಮುಖ ಮುಖ್ಯಾಂಶಗಳು

  • ಸಫಾರಿ ವೇಳೆ ನಿಯಮ ಉಲ್ಲಂರಘಿಸಿ ರಕುಲ್ ವಾಹನದಿಂದ ಕೆಳಗಿಳಿದಿದ್ದಾರೆ ಎಂದು ನೆಟ್ಟಿಗರಿಂದ ಆರೋಪ
  • ಅನಾರೋಗ್ಯದ ಕಾರಣ ರಾಕುಲ್ ಉದ್ಯಾನವನದ ಒಳಗೆ ಪ್ರವೇಶಿಸದೆ ಹಿಂತಿರುಗಿದ್ದರು ಎಂದ ಅರಣ್ಯ ಇಲಾಖೆ
  • ರಕುಲ್ ಪ್ರೀತ್​ ಸಿಂಗ್​ ನಟನೆಯ 'ಪತಿ ಪತ್ನಿ ಔರ್ ವೋ 2' ಮೇ 15 ರಂದು ತೆರೆಗೆ
Rakul Preet Singh Gir Forest Controversy: ರಕುಲ್​ ಪ್ರೀತ್​ ಸಿಂಗ್​ ಅರಣ್ಯ ಪ್ರದೇಶದಲ್ಲಿ ಇಳಿದು ನಿಯಮ ಉಲ್ಲಂಘಿಸಿದ್ದಾರೆ ಎಂದು ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಉದ್ಯಾನವನದ ಒಳಗಿನ ನಿರ್ಬಂಧಿತ ಪ್ರದೇಶದ್ದಲ್ಲ, ಬದಲಾಗಿ ಪ್ರವೇಶ ದ್ವಾರದ ಹೊರಗಿನ ಆವರಣದ್ದಾಗಿದೆ ಎಂದು ಗಿರ್ ಅರಣ್ಯ ಇಲಾಖೆಯು ರಕುಲ್​ ಪ್ರೀತ್​ ಸಿಂಗ್​ ಅವರು ನಿಯಮ ಉಲ್ಲಂಘಿಸಿದ್ದಾರೆ ಎಂದು ವೈರಲ್​ ಆಗಿದ್ದ ವಿಡಿಯೋವೊಂದಕ್ಕೆ ಸ್ಪಷ್ಟನೆ ಹೊರಡಿಸಿದೆ.
ಇತ್ತೀಚೆಗೆ  'ಪತಿ ಪತ್ನಿ ಔರ್ ವೋ 2'  ಪ್ರಚಾರಕ್ಕಾಗಿ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ವೇಳೆ, ಅವರು ಎದ್ದು ಕೆಳಕ್ಕೆ ಇಳಿದಿದ್ದರು. ಈ ವಿಡಿಯೋವನ್ನು ಮೊಬೈಲ್​ನಲ್ಲಿ ಪ್ರವಾಸಿಗರು ರೆಕಾರ್ಡ್​ ಮಾಡಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. 
ಅರಣ್ಯ ಇಲಾಖೆ ಹೇಳಿದ್ದೇನು?
ಸಫಾರಿ ವಾಹನದಿಂದ ನಟಿ ರಾಕುಲ್ ಪ್ರೀತ್ ಸಿಂಗ್  ಕೆಳಗಿಳಿದು ಓಡಾಡುತ್ತಿರುವ ವಿಡಿಯೋಕಂಡ ನೆಟ್ಟಿಗರು, ನಿರ್ಬಂಧಿತ ಪ್ರದೇಶದಲ್ಲಿ ವಾಹನದಿಂದ ಕೆಳಗಿಳಿಯುವುದು ಅರಣ್ಯ ನಿಯಮಗಳ ಉಲ್ಲಂಘನೆಯಲ್ಲವೇ? ಸೆಲೆಬ್ರಿಟಿಗಳಿಗೆ ಪ್ರತ್ಯೇಕ ನಿಯಮಗಳಿವೆಯೇ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಉದ್ಯಾನವನದ ಪ್ರವೇಶ ದ್ವಾರದ ಒಳಗೆ ಹೋದ ನಂತರ ಯಾರೂ ವಾಹನದಿಂದ ಕೆಳಗಿಳಿಯಲು ಅವಕಾಶವಿರುವುದಿಲ್ಲ. ಆದರೆ ರಾಕುಲ್ ಅವರು ಉದ್ಯಾನವನ ಪ್ರವೇಶಿಸುವ ಮೊದಲೇ ಅನಾರೋಗ್ಯದ ಕಾರಣದಿಂದ ಅಲ್ಲಿಂದ ಹಿಂತಿರುಗಿದ್ದರು.  ಹೀಗಾಗಿ, ಅವರು ಯಾವುದೇ ಅರಣ್ಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ರಕುಲ್​ ಪ್ರೀತ್​ ಸಿಂಗ್​ ಅವರೊಂದಿಗೆ ನಟ ಆಯುಷ್ಮಾನ್ ಖುರಾನಾ ಮತ್ತು ವಾಮಿಖಾ ಗಬ್ಬಿ ಕೂಡ ಇದ್ದರು. ಇವರೆಲ್ಲರೂ ಗುಜರಾತಿ ಥಾಲಿಯನ್ನು ಸವಿಯುತ್ತಾ ತಮ್ಮ ಚಿತ್ರದ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದೆ.  ಇದೇ ಮೇ.15ರಂದು ರಕುಲ್​​ ಪ್ರೀತ್​ ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್  ನಟನೆಯ 'ಪತಿ ಪತ್ನಿ ಔರ್ ವೋ 2' ಮೇ 15 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

ಸಿನಿಮಾ ವಿರುದ್ಧ ಕಿಡಿ

 'ಪತಿ ಪತ್ನಿ ಔರ್ ವೋ 2 ಸಿನಿಮಾ ಬಗ್ಗೆ ಹಲವು ವಿವಾದಗಳು ಎದ್ದಿದ್ದವು, ಇದು ಅಕ್ರಮ ಸಂಬಂಧವನ್ನು ವಿಜೃಂಭಿಸಿದಂತೆ  ತೋರಿಸಲಾಗಿದೆ. ಈ ಸಿನಿಮಾದ ಕತೆಯ ಹಂದರ ಸರಿಯಿಲ್ಲ ಎನ್ನಲಾಗಿತ್ತು, ಈ ಬಗ್ಗೆ ಇತ್ತೀಚೆಗೆ ಆಯುಷ್ಮಾನ್​ ಖುರಾನ  ಮಾತನಾಡಿ ನನಗೂ ಮಕ್ಕಳಿದ್ದಾರೆ. ಅವರು ನೋಡುವಂತಹ ಸಿನಿಮಾವನ್ನು ಮಾಡುತ್ತೇನೆ. ಅಕ್ರಮ ಸಂಬಂಧ ಗ್ಲೋರಿಫೈ ಮಾಡುವ ಪಾತ್ರ ಮಾಡೋಲ್ಲ ಎಂದು ಸಮರ್ಥಿಸಿಕೊಂಡಿದ್ದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net