ಬಿಜೆಪಿಯ ಒಂದೇ ರಾಷ್ಟ್ರ, ಒಂದೇ ಭಾಷೆ, ಒಂದೇ ಧರ್ಮ ಎಂಬ ಸಿದ್ಧಾಂತವು ಭಾರತದ ಬಹುತ್ವಕ್ಕೆ ಮಾರಕವಾಗಿದೆ. ಬಂಗಾಳದ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ರಕ್ಷಿಸುವ ಏಕೈಕ ಶಕ್ತಿ ಕಾಂಗ್ರೆಸ್ ಎಂದು ರಾಹುಲ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಪ್ರೀತಿಯ ಮೂಲಕ ದ್ವೇಷವನ್ನು ಸೋಲಿಸುವುದೇ ಕಾಂಗ್ರೆಸ್ನ ಅಂತಿಮ ಗುರಿ ಎಂದು ಪುನರುಚ್ಚರಿಸಿದ್ದಾರೆ.