Dhurandhar 2 Viral Trend: ನೀವೂ ಆಗಬಹುದು 'ಧುರಂಧರ್' ಹೀರೋ! ನಿಮ್ಮ ನೆಚ್ಚಿನ ಪ್ರಾಂಪ್ಟ್ ಇಲ್ಲಿದೆ ಟ್ರೈ ಮಾಡಿ

Dhurandhar 2
Dhurandhar 2
Published on
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಈಗ ಎಲ್ಲಿ ನೋಡಿದರೂ 'ಧುರಂಧರ್' (Dhurandhar 2)ದ್ದೇ ಹವಾ! ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಧುರಂಧರ್ - ದಿ ರಿವೆಂಜ್' ಚಿತ್ರದ ಕ್ರೇಜ್ ಈಗ ಡಿಜಿಟಲ್ ಲೋಕಕ್ಕೂ ಲಗ್ಗೆ ಇಟ್ಟಿದೆ. ಈ ಚಿತ್ರದಿಂದ ಪ್ರೇರಿತವಾದ ಪೋಸ್ಟರ್‌ಗಳು ಮತ್ತು ಮೀಮ್‌ಗಳು ಸಖತ್ ವೈರಲ್ ಆಗುತ್ತಿದ್ದು, ಈಗ ಸಾಮಾನ್ಯ ಜನರೂ ಸಹ ತಮ್ಮ ಫೋಟೋಗಳನ್ನು ಈ ಸಿನಿಮೀಯ ಶೈಲಿಯಲ್ಲಿ ಎಡಿಟ್ ಮಾಡಿಕೊಳ್ಳುತ್ತಿದ್ದಾರೆ.
ನೀವು ಕೂಡ ಬೆಂಕಿ, ಹೊಗೆ ಮತ್ತು ಸ್ಫೋಟಕ ಹಿನ್ನೆಲೆಯಿರುವ ಮಾಸ್ ಆಕ್ಷನ್ ಹೀರೋ ಪೋಸ್ಟರ್‌ನಲ್ಲಿ ಮಿಂಚಬೇಕೆ? ಹಾಗಿದ್ದರೆ ಗೂಗಲ್ ಜೆಮಿನಿ (Google Gemini) ಸಹಾಯದಿಂದ ಕೇವಲ ಎರಡೇ ನಿಮಿಷದಲ್ಲಿ ಇದನ್ನು ಮಾಡಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು 'ಧುರಂಧರ್' ವೈರಲ್ ಟ್ರೆಂಡ್?

ಸಾಮಾನ್ಯವಾಗಿ ಸಿನಿಮಾದ ಪೋಸ್ಟರ್‌ಗಳನ್ನು ವೃತ್ತಿಪರ ಡಿಸೈನರ್‌ಗಳು ಮಾತ್ರ ಮಾಡಲು ಸಾಧ್ಯ ಎಂಬ ಕಾಲವಿತ್ತು. ಆದರೆ ಈಗ AI (ಕೃತಕ ಬುದ್ಧಿಮತ್ತೆ) ಬಂದ ಮೇಲೆ ಎಲ್ಲವೂ ಬದಲಾಗಿದೆ. ಜನರು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿ, 'ಧುರಂಧರ್' ಚಿತ್ರದ ನಾಯಕನಂತೆಯೇ ತೀವ್ರವಾದ ಅಭಿವ್ಯಕ್ತಿ, ರಗಡ್ ಲುಕ್ ಮತ್ತು ಆಕ್ಷನ್ ಹಿನ್ನೆಲೆಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಈಗ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಗೂಗಲ್ ಜೆಮಿನಿ ಬಳಸಿ ಪೋಸ್ಟರ್ ರಚಿಸುವುದು ಹೇಗೆ?

ಗೂಗಲ್ ಜೆಮಿನಿ ಅತ್ಯಂತ ಸುಧಾರಿತ AI ಆಗಿದ್ದು, ಇದು ನಿಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ನೀಡಬಲ್ಲದು. ಪೋಸ್ಟರ್ ತಯಾರಿಸಲು ಈ ಹಂತಗಳನ್ನು ಅನುಸರಿಸಿ:
ಜೆಮಿನಿ ಓಪನ್ ಮಾಡಿ: ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಜೆಮಿನಿ (Gemini) ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ತೆರೆಯಿರಿ.
ಫೋಟೋ ಅಪ್‌ಲೋಡ್: ಅಲ್ಲಿರುವ 'ಇಮೇಜ್' ಐಕಾನ್ ಕ್ಲಿಕ್ ಮಾಡಿ, ನಿಮ್ಮ ಒಂದು ಸ್ಪಷ್ಟವಾದ ಫೋಟೋವನ್ನು (Full Body or Mid-Shot) ಅಪ್‌ಲೋಡ್ ಮಾಡಿ.
ಪ್ರಾಂಪ್ಟ್ ನೀಡಿ: ಫೋಟೋ ಅಪ್‌ಲೋಡ್ ಮಾಡಿದ ನಂತರ, ಕೆಳಗಿನ ಪ್ರಾಂಪ್ಟ್ ಅನ್ನು ಕಾಪಿ ಮಾಡಿ ಅಲ್ಲಿ ಪೇಸ್ಟ್ ಮಾಡಿ.
Dhurandhar Prompt: “A dramatic Bollywood action movie poster in Dhurandhar style, featuring a powerful protagonist in a heroic stance, intense expression, rugged look, slightly messy hair and light beard, wearing a dark outfit. Background filled with fire, smoke, explosions and a chaotic city battlefield. Strong orange and teal tones, cinematic lighting, high contrast shadows, dust particles in the air. Low-angle shot for a larger-than-life feel. Add sweat, subtle blood marks and dramatic storm clouds. Ultra-detailed face, sharp focus, 8K quality. Add bold metallic title text ‘DHURANDHAR’ at the bottom with glowing edges.”
ಜನರೇಟ್ ಮಾಡಿ: ಪ್ರಾಂಪ್ಟ್ ನೀಡಿದ ನಂತರ 'Generate' ಬಟನ್ ಒತ್ತಿರಿ. ಕೆಲವೇ ಸೆಕೆಂಡುಗಳಲ್ಲಿ ಜೆಮಿನಿ ನಿಮಗಾಗಿ ಅದ್ಭುತವಾದ ಸಿನಿಮೀಯ ಪೋಸ್ಟರ್ ಸಿದ್ಧಪಡಿಸುತ್ತದೆ.
ಉತ್ತಮ ಪೋಸ್ಟರ್‌ಗಾಗಿ ಈ ಟಿಪ್ಸ್ ನೆನಪಿರಲಿ:
ಫೋಟೋ ಕ್ಲಾರಿಟಿ: ನೀವು ಅಪ್‌ಲೋಡ್ ಮಾಡುವ ಫೋಟೋ ಎಷ್ಟು ಸ್ಪಷ್ಟವಾಗಿದೆಯೋ, AI ಅಷ್ಟೇ ನಿಖರವಾಗಿ ನಿಮ್ಮ ಮುಖದ ಚಹರೆಯನ್ನು ಪೋಸ್ಟರ್‌ಗೆ ಅಳವಡಿಸುತ್ತದೆ.
ವಿವರವಾದ ಮಾಹಿತಿ: ನೀವು ಪ್ರಾಂಪ್ಟ್‌ನಲ್ಲಿ ಎಷ್ಟು ಹೆಚ್ಚಿನ ವಿವರಗಳನ್ನು ನೀಡುತ್ತೀರೋ (ಉದಾಹರಣೆಗೆ: ಮುಖದ ಮೇಲೆ ಗಾಯದ ಗುರುತು ಇರಲಿ, ಹಿನ್ನೆಲೆಯಲ್ಲಿ ಮಳೆ ಇರಲಿ ಇತ್ಯಾದಿ), ಪೋಸ್ಟರ್ ಅಷ್ಟು ವಿಭಿನ್ನವಾಗಿ ಮೂಡಿಬರುತ್ತದೆ.
ಪ್ರಯೋಗ ಮಾಡಿ: ಒಂದೇ ಬಾರಿ ಸರಿಯಾದ ಪೋಸ್ಟರ್ ಬರದಿದ್ದರೆ, ಪ್ರಾಂಪ್ಟ್‌ನಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಮತ್ತೆ ಪ್ರಯತ್ನಿಸಿ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net