ಕೆಕೆಆರ್ ಪಾಲಾದ ಧೋನಿ ಶಿಷ್ಯ; ಐಪಿಎಲ್​ ಹರಾಜಿನಲ್ಲಿ ಸಂಚಲನ ಸೃಷ್ಠಿಸಿದ ಜೂನಿಯರ್​ ಮಲಿಂಗ | IPL auction

ಶ್ರೀಲಂಕಾದ ಸ್ಟಾರ್ ವೇಗಿ ಮಥಿಶಾ ಪತಿರಾಣ
ಶ್ರೀಲಂಕಾದ ಸ್ಟಾರ್ ವೇಗಿ ಮಥಿಶಾ ಪತಿರಾಣ
Published on
IPL auction: ಶ್ರೀಲಂಕಾದ ಸ್ಟಾರ್ ವೇಗಿ ಮಥಿಶಾ ಪತಿರಾಣ 2026 ರ ಐಪಿಎಲ್ ಮಿನಿ-ಹರಾಜಿನಲ್ಲಿ(IPL auction) ಭಾರಿ ಮೊತ್ತವನ್ನು ಪಡೆದಿದ್ದಾರೆ. ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ₹18 ಕೋಟಿಗೆ ಖರೀದಿಸಿದೆ. ಈ ಸ್ಟಾರ್​ ವೇಗಿಯು ಡೆತ್ ಓವರ್‌ಗಳಲ್ಲಿ ತಮ್ಮ ಪ್ರಭಾವಶಾಲಿ ಬೌಲಿಂಗ್‌ನಿಂದ ಹೆಸರುವಾಸಿಯಾಗಿದ್ದಾರೆ.
ಈ ಮಿನಿ ಹರಾಜಿನಲ್ಲಿ ಪತಿರಾಣ ₹2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದರು. ಪತಿರಾನ ಬಿಡ್ಡಿಂಗ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ₹2 ಕೋಟಿ ಮೂಲ ಬೆಲೆಗೆ ಆರಂಭಿಸಿತು. ನಂತರ ಲಕ್ನೋ ಸೂಪರ್ ಜೈಂಟ್ಸ್ ಸತತವಾಗಿ ಬಿಡ್ಡಿಂಗ್ ಕೂಗುವ ಮೂಲಕ ಸ್ಟಾರ್​ ಬೌಲರ್​ ಬೆಲೆಯನ್ನು ₹10 ಕೋಟಿ ದಾಟಿಸಿತು. ಅಲ್ಲದೆ, ಎರಡೂ ಫ್ರಾಂಚೈಸಿಗಳ ನಡುವಿನ ಸುದೀರ್ಘ ಬಿಡ್ಡಿಂಗ್ ಯುದ್ಧದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ಅಂತಿಮವಾಗಿ ಬಿಡ್ ಗೆದ್ದಿತು. ಪ್ರತಿಸ್ಪರ್ಧಿ LSG ₹17.80 ಕೋಟಿಗೆ ತಮ್ಮ ಅಂತಿಮ ಬಿಡ್ ಕೂಗಿತು.

ಕೆಕೆಆರ್ ಪತಿರಾಣ ಖರೀದಿಸಿದ್ಯಾಕೆ..?

ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್‌ನನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡಿದ ಕೆಕೆಆರ್​ ನಂತರ, ತಂಡಕ್ಕೆ ವಿಶ್ವಾಸಾರ್ಹ ವಿದೇಶಿ ಡೆತ್-ಓವರ್‌ಗಳ ಬೌಲರ್ ಅಗತ್ಯವಿತ್ತು. ಈ ಅಯ್ಕೆಯನ್ನು ಕೆಕೆಆರ್ ಮಥಿಶಾ ಪತಿರಾಣರಲ್ಲಿ ಕಂಡುಕೊಂಡಿದ್ದಾರೆ. ಅಲ್ಲದೆ, ಪತಿರಾಣ 150 ಕಿಮೀ ವೇಗದಲ್ಲಿ ಸ್ಥಿರವಾದ ಯಾರ್ಕರ್‌ಗಳನ್ನು ಎಸೆಯಬಲ್ಲರಾಗಿದ್ದಾರೆ. ಇವರು ಡೆತ್ ಓವರ್‌ಗಳಲ್ಲಿ ಅತ್ಯಂತ ಮಾರಕ ವೇಗಿ ಎಂದು ಹೆಸರುವಾಸಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಪತಿರಾಣ ಕೊನೆಯ ಓವರ್‌ಗಳಲ್ಲಿ ತಮ್ಮ ಅದ್ಭುತ ಬೌಲಿಂಗ್‌ನಿಂದ ಹಲವು ಬಾರಿ ಪಂದ್ಯಗಳನ್ನು ಗೆಲ್ಲಿಸಿದ್ದಾರೆ.

ಪತಿರಾಣರನ್ನು ಕೈಬಿಟ್ಟ ಸಿಎಸ್‌ಕೆ

ಚೆನ್ನೈ ಸೂಪರ್ ಕಿಂಗ್ಸ್ ಪರ 32 ಐಪಿಎಲ್ ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಕೇವಲ ಎಂಟಕ್ಕಿಂತ ಹೆಚ್ಚು ಎಕಾನಮಿಯನ್ನು ಹೊಂದಿದ್ದಾರೆ. ತಮ್ಮ ಸ್ಲಿಂಗಿ ಆಕ್ಷನ್‌ಗೆ ಹೆಸರುವಾಸಿಯಾದ ಪತಿರಣ 2023 ರಲ್ಲಿ ಸಿಎಸ್‌ಕೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2025 ರ ಋತುವಿಗೆ ಮೊದಲು ಸಿಎಸ್‌ಕೆ ಅವರನ್ನು 13 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ ಇವರ ಅಸ್ಥಿರ ಪ್ರದರ್ಶನದಿಂದ ಪತಿರಾಣ 12 ಪಂದ್ಯಗಳಲ್ಲಿ 10.13 ಎಕಾನಮಿ ದರದಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದರು. ಹೆಚ್ಚಾಗಿ ಗಾಯಗೊಂಡ ಕಾರಣ, ಮುಂಬರುವ ಋತುವಿಗೆ ಮೊದಲು ಅವರನ್ನು ಸಿಎಸ್‌ಕೆ ಬಿಡುಗಡೆ ಮಾಡಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net