ಈ ತೀರ್ಪನ್ನು ಭೋಜ ಉತ್ಸವ ಸಮಿತಿಯು ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ಸಮಿತಿಯ ಪ್ರಮುಖ ಸದಸ್ಯರಾದ ರಾಜೇಶ್ ಶುಕ್ಲಾ, ಇದೊಂದು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದು, ಈ ಜಾಗಕ್ಕಾಗಿ ದಶಕಗಳ ಕಾಲ ಕಾನೂನು ಹೋರಾಟ ನಡೆಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ, ಲಂಡನ್ನ ಮ್ಯೂಸಿಯಂನಲ್ಲಿರುವ ವಾಗ್ದೇವಿ ಸರಸ್ವತಿ ದೇವಿಯ ಮೂಲ ವಿಗ್ರಹವು ಶೀಘ್ರದಲ್ಲೇ ಮರಳಿ ದೇವಾಲಯದ ಆವರಣವನ್ನು ಸೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಹೈಕೋರ್ಟ್ ತೀರ್ಪನ್ನು ಗೌರವಿಸಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.