ದಟ್ಟವಾದ ಮಂಜು ಮತ್ತು ಹೊಗೆ; ಭಾರತ & ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯ ರದ್ದು | Indina V/S South Africa
ಸಾಂದರ್ಭಿಕ ಚಿತ್ರ
Published on:
Copied
Follow Us
ಲಖನೌ: ದಟ್ಟವಾದ ಮಂಜು ಮತ್ತು ಹೊಗೆಯ ಕಾರಣಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ(Indina V/S South Africa) ನಡುವೆ ಇಂದು(ಡಿ. 17) ನಡೆಯಬೇಕಿದ್ದ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಟಾಸ್ ಮಾಡದೆಯೇ ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.
ಲಖನೌದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪಂದ್ಯ ನಿಗದಿಯಾಗಿತ್ತು. ನಿಗದಿತ ಆರಂಭಕ್ಕೂ ಮುಂಚೆಯೇ ನೆಲವನ್ನು ದಟ್ಟವಾದ ಹೊಗೆ ಆವರಿಸಿತ್ತು, ಇದರಿಂದಾಗಿ ಮೊದಲು ಟಾಸ್ ವಿಳಂಬವಾಯಿತು. ಬಳಿಕ ನಿರಂತರವಾಗಿ ಮಂಜು ಆವರಿಸಿದ್ದರಿಂದ ಕೊನೆಯದಾಗಿ ಅಂಪೈರ್ಗಳು ಪಂದ್ಯವನ್ನೇ ರದ್ದುಗೊಳಿಸಿದ್ದಾರೆ.
ಮೊದಲು ಸಂಜೆ 6.50ರ ಸುಮಾರಿಗೆ ಕ್ರೀಡಾಂಗಣವನ್ನು ತಪಾಸಣೆ ನಡೆಸಲಾಯಿತು. ಆದರೆ ದಟ್ಟವಾದ ಮಂಜು ಮತ್ತು ಹೊಗೆ ಆವರಿಸಿಕೊಂಡಿತ್ತು. ಬಳಿಕ 7.30ರ ಸುಮಾರಿಗೆ ಮತ್ತೊಮ್ಮೆ ಟಾಸ್ ಮಾಡಲು ನಿರ್ಧರಿಸಲಾಗಿತ್ತು. ಆಗಲು ಯಾವುದೇ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿರಲಿಲ್ಲ. ರಾತ್ರಿ 8:00 ಗಂಟೆಗೆ ಮತ್ತೊಂದು ತಪಾಸಣೆ ನಡೆಯಿತು. ಕೊನೆಯದಾಗಿ 9.25ಕ್ಕೆ ಮತ್ತೊಮ್ಮೆ ಕ್ರೀಡಾಂಗಣ ಪರಿಶೀಲನೆ ನಡೆಸಲಾಯಿತು. ಆಗಲೂ ಯಾವುದೇ ಮಂಜು ಕಡಿಮೆಯಾಗಲಿಲ್ಲ ಅಂತಿಮವಾಗಿ ಪಂದ್ಯವನ್ನೇ ನಡೆಸದಿರಲು ನಿರ್ಧರಿಸಿದ್ದಾರೆ.
ಪ್ರಸ್ತುತ ಭಾರತವು ಐದು ಪಂದ್ಯಗಳ ಸರಣಿಯನ್ನು 2-1 ರಿಂದ ಮುನ್ನಡೆಸುತ್ತಿದೆ. ಕೈಬಿಡುವಿಕೆ ಎಂದರೆ ದಕ್ಷಿಣ ಆಫ್ರಿಕಾಕ್ಕೆ ಈಗ ಸರಣಿಯನ್ನು ಸಮಬಲಗೊಳಿಸಲು ಒಂದೇ ಒಂದು ಅವಕಾಶವಿದೆ. ಐದನೇ ಮತ್ತು ಅಂತಿಮ ಟಿ20ಐ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ (ಏಜೆನ್ಸೀಸ್).