ರಸ್ತೆ ಬದಿಯಲ್ಲಿ ಕಲ್ಲಿನಂತೆ ನಿಂತ ಡೆಲಿವರಿ ಬಾಯ್: ಈ ವೈರಲ್​ ವಿಡಿಯೋ ಹಿಂದಿನ ಅಸಲಿ ಸತ್ಯವೇನು? Viral Video

ಬ್ಲಿಂಕಿಟ್ ಡೆಲಿವರಿ ಹುಡುಗನೊಬ್ಬ ಗಂಟೆಗಟ್ಟಲೆ ಸ್ಥಬ್ದವಾಗಿ ನಿಂತಿರುವ ವಿಡಿಯೋ ವೈರಲ್
ಬ್ಲಿಂಕಿಟ್ ಡೆಲಿವರಿ ಹುಡುಗನೊಬ್ಬ ಗಂಟೆಗಟ್ಟಲೆ ಸ್ಥಬ್ದವಾಗಿ ನಿಂತಿರುವ ವಿಡಿಯೋ ವೈರಲ್
Published on

ಪ್ರಮುಖ ಮುಖ್ಯಾಂಶಗಳು

  • ಬ್ಲಿಂಕಿಟ್ ಡೆಲಿವರಿ ಹುಡುಗನೊಬ್ಬ ಗಂಟೆಗಟ್ಟಲೆ ಸ್ಥಬ್ದವಾಗಿ ನಿಂತಿರುವ ವಿಡಿಯೋ ವೈರಲ್
  • ಚಂಡೀಗಢದ ಸೆಕ್ಟರ್​ 33 ರಲ್ಲಿ ನಡೆದಿರುವ ಘಟನೆ
  • ಜೋಂಬಿ ವೈರಸ್​ ಎಂದ ನೆಟ್ಟಿಗರು
  • ಇದು ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಎಂದ ಜನ
ಚಂಡೀಗಢ​: ಭಾರತದಲ್ಲಿ ಇಂರ್ಟನೆಟ್​ ಕ್ರಾಂತಿಯಾದ ದಿನದಿಂದ ಒಂದಿಲ್ಲೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Viral Video) ಆಗುತ್ತಿರುತ್ತವೆ. ಕೆಲ ದಿನಗಳ ಹಿಂದೆ ಚಂಡೀಗಢದಲ್ಲಿ ಸೆರೆ ಹಿಡಿಯಲಾದ ಎಂಬ ವಿಡಿಯೋ ಸಖತ್​ ಸುದ್ದಿ ಮಾಡುತ್ತಿದೆ.

ಕಲ್ಲಿನಿಂತೆ ನಿಂತಿರವ ವ್ಯಕ್ತಿ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಒಬ್ಬ ಬ್ಲಿಕಿಂಟ್​ ಡೆಲಿವರಿ ಹುಡುಗ ಬಾಯಲ್ಲಿ ಬೀಡಿಯನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ಸುಮಾರು ಎರಡರಿಂದ ಮೂರು ಗಂಟೆ ಒಂದೇ ಸ್ಥಳದಲ್ಲಿ ನಿಂತಿರುವುದು ಸ್ಥಳೀಯರಲ್ಲಿ ಭಯವನ್ನು ಹುಟ್ಟಿಸಿದ ಘಟನೆ ಚಂಡೀಗಢದ ಸೆಕ್ಟರ್​ 33 ರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಜೋಂಬಿ ವೈರಸ್​ ಎಂದ ನೆಟ್ಟಿಗರು!
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬೆರಳುಗಳಿಗೆ ಕೆಲಸ ಕೊಟ್ಟಿದ್ದಾರೆ. ಕೆಲವರು ಇದೊಂದು ಜೋಂಬಿ ವೈರಸ್​, ಇದು ಅಮೆರಿಕ ಮತ್ತು ಇತರೆ ಯುರೋಪಿಯನ್​ ದೇಶಗಳಲ್ಲಿ ಇದನ್ನು ನೋಡಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಮಾದಕ ವಸ್ತುಗಳ ಅತಿಯಾದ ಬಳಕೆಯಿಂದ ಉಂಟಾಗುವ ಸ್ಥಿತಿ, ಪಂಜಾಬ್​ ಮತ್ತು ಚಂಡೀಗಢದ ಯುವಕರು ಈ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ದುಃಖದ ಸಂಗತಿ ಎಂದು ಹೇಳಿದ್ದಾರೆ.
ಇನ್ನೂ ಕೆಲ ಬಳಕೆದಾರರು, ಬಹುಶಃ ಇವನು ಮಾನಸಿಕ ಅಸ್ವಸ್ಥನಿರಬೇಕು, ಈ ರೀತಿಯ ಜನರನ್ನು ಡೆಲವರಿ ಕೆಲಸಕ್ಕೆ ತೆಗೆದುಕೊಳ್ಳುವುದು ತಪ್ಪು. ಒಂದು ವೇಳೆ ಡೆಲವರಿ ಸಂದರ್ಭದಲ್ಲಿ ಜನರ ಮೇಲೆ ಹಲ್ಲೆಗೆ ಮುಂದಾದರೆ ಯಾರು ಹೊಣೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ಈ ವ್ಯಕ್ತಿ ಯಾರು? ಯಾಕೆ ಹೀಗೆ ಒಂದೇ ಸ್ಥಳದಲ್ಲಿ ತನ್ನ ಮೇಲೆ ಹಿಡಿತ ಕಳೆದುಕೊಂಡು ನಿಂತಿದ್ದ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಇಲ್ಲಿವರೆಗೆ ದೊರೆತಿಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net