ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕ್ಷೇತ್ರ ಪುನರ್ವಿಂಗಡೆ ನಿರ್ಣಯವು ಭಾರತದ ಪ್ರಜಾಪ್ರಭುತ್ವದಲ್ಲಿ ಯಾರಿಗೆ ಧ್ವನಿ ಸಿಗುತ್ತದೆ ಮತ್ತು ಪ್ರಾತಿನಿಧ್ಯ ಎಷ್ಟು ಎಂಬುದರ ಬಗ್ಗೆ ನಿರ್ಧರಿಸುತ್ತದೆ. ಅದು ಒಕ್ಕೂಟವನ್ನು ಬಲಪಡಿಸಬೇಕು, ದುರ್ಬಲಗೊಳಿಸಬಾರದು. ಪೆರಿಯಾರ್ ಅವರ ಮಾರ್ಗದರ್ಶನ, ಅಣ್ಣಾ ಅವರ ಸ್ಪೂರ್ತಿ ಹಾಗೂ ಕಲೈನಾರ್ ಅವರಿಂದ ಬಲಗೊಂಡ ತಮಿಳುನಾಡು ಎಂದಿಗೂ ನ್ಯಾಯ, ಘನತೆ ಹಾಗೂ ಒಕ್ಕೂಟವಾದಕ್ಕಾಗಿ ನಿಂತಿದೆ ಎಂದು ಹೇಳಿದ್ದಾರೆ.