ಹೆಂಡತಿ ಮಕ್ಕಳಿದ್ದರೂ ಸ್ನೇಹಿತನ ಮಗಳ ಮೇಲೆ ವ್ಯಾಮೋಹ?ಯುವತಿಗೆ ಮದುವೆ ನಿರಾಕರಿಸಿದ್ದಕ್ಕೆ 47ರ ವ್ಯಕ್ತಿ ಆತ್ಮಹತ್ಯೆ...delhi crime

ಮದುವೆಯಾಗಿ ಹೆಂಡತಿ, ಇಬ್ಬರು ಮಕ್ಕಳಿದ್ದರೂ ಸ್ನೇಹಿತನ 20 ವರ್ಷದ ಮಗಳನ್ನೇ ಮದುವೆಯಾಗಲು ಬಯಸಿದ್ದ 47 ವರ್ಷದ ವ್ಯಕ್ತಿಯೊಬ್ಬ ಯುವತಿ ನಿರಾಕರಿಸಿದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯ ವಜೀರ್‌ಪುರ ಕೈಗಾರಿಕಾ ಪ್ರದೇಶದಲ್ಲಿರುವ ಪಾತ್ರೆ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಆತ ಬರೆದಿದ್ದ ಎನ್ನಲಾದ ಡೆತ್‌ನೋಟ್ ಕೂಡ ಪೊಲೀಸರಿಗೆ ಸಿಕ್ಕಿದ್ದು, ಪ್ರಕರಣ ಹಲವು ಪ್ರಶ್ನೆಗಳನ್ನು ಇದೀಗ ಹುಟ್ಟುಹಾಕಿದೆ...delhi crime
47ರ ವ್ಯಕ್ತಿ ಆತ್ಮಹತ್ಯೆ
47ರ ವ್ಯಕ್ತಿ ಆತ್ಮಹತ್ಯೆWEB
Published on: 

Delhi Crime: ಮದುವೆಯಾಗಿ ಹೆಂಡತಿ, ಇಬ್ಬರು ಮಕ್ಕಳಿದ್ದರೂ ಸ್ನೇಹಿತನ 20 ವರ್ಷದ ಮಗಳನ್ನೇ ಮದುವೆಯಾಗಲು ಬಯಸಿದ್ದ 47 ವರ್ಷದ ವ್ಯಕ್ತಿಯೊಬ್ಬ ಯುವತಿ ನಿರಾಕರಿಸಿದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯ ವಜೀರ್‌ಪುರ ಕೈಗಾರಿಕಾ ಪ್ರದೇಶದಲ್ಲಿರುವ ಪಾತ್ರೆ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಆತ ಬರೆದಿದ್ದ ಎನ್ನಲಾದ ಡೆತ್‌ನೋಟ್ ಕೂಡ ಪೊಲೀಸರಿಗೆ ಸಿಕ್ಕಿದ್ದು, ಪ್ರಕರಣ ಹಲವು ಪ್ರಶ್ನೆಗಳನ್ನು ಇದೀಗ ಹುಟ್ಟುಹಾಕಿದೆ.

ಯಾರು ಈ ವ್ಯಕ್ತಿ?

ಮೃತನನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರದ ನಿವಾಸಿ ಸಂದೀಪ್ (47) ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದ. ಸ್ನೇಹಿತನ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಸಂದೀಪ್, ಸ್ನೇಹಿತನ 20 ವರ್ಷದ ಮಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಯುವತಿ ದೆಹಲಿಯ ವಜೀರ್‌ಪುರ ಕೈಗಾರಿಕಾ ಪ್ರದೇಶದಲ್ಲಿರುವ ಪಾತ್ರೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಒಬ್ಬಳೇ ವಾಸಿಸುತ್ತಿದ್ದಳು.

ಮದುವೆ ಪ್ರಸ್ತಾಪಕ್ಕೆ ಯುವತಿಯ ನಿರಾಕರಣೆ!

ಪೊಲೀಸರ ಪ್ರಕಾರ, ಸಂದೀಪ್ ಯುವತಿಗೆ ಆಗಾಗ್ಗೆ ದೂರವಾಣಿ ಕರೆ ಮಾಡುತ್ತಿದ್ದ. ಆದರೆ ಕೆಲ ಸಮಯದಿಂದ ಆಕೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಸಂದೀಪ್ ಗುರುವಾರ ದೆಹಲಿಗೆ ಬಂದಿದ್ದ. ಶುಕ್ರವಾರ ಎರಡು ಬಾಟಲಿ ಪೆಟ್ರೋಲ್‌ನೊಂದಿಗೆ ಯುವತಿ ಕೆಲಸ ಮಾಡುತ್ತಿದ್ದ ಕಾರ್ಖಾನೆಗೆ ತೆರಳಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಾನೆ. ಆದರೆ ಯುವತಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ.

ಇದನ್ನೂ ಓದಿ: ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ! ಗೋಕಾಕ್ ಫಾಲ್ಸ್‌ಗೆ ಕರೆದೊಯ್ದು ಪ್ರೇಯಸಿಯನ್ನೇ ಕೊಂದ ಪ್ರೇಮಿ ಅರೆಸ್ಟ್‌...Gokak Murder Case

ಇದರಿಂದ ಆಕ್ರೋಶಗೊಂಡ ಸಂದೀಪ್ ಕಾರ್ಖಾನೆಯೊಳಗೆ ತನ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಕಿರುಚಾಟ ಕೇಳಿದ ಕಾರ್ಖಾನೆಯ ಕಾರ್ಮಿಕರು ತಕ್ಷಣ ನೆರವಿಗೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ದೀಪ್ ಚಂದ್ ಬಂಧು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಯುವತಿಯ ಹೆಸರಿನ ಉಲ್ಲೇಖ!

ಘಟನೆಯ ತನಿಖೆ ನಡೆಸಿದ ಪೊಲೀಸರಿಗೆ ಸಂದೀಪ್ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ. ಯುವತಿ ತನ್ನೊಂದಿಗಿನ ಸ್ನೇಹವನ್ನು ಕಡಿದುಕೊಂಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಅದರಲ್ಲಿ ಸಂದೀಪ್ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆತನೊಂದಿಗೆ ಯಾವುದೇ ಪ್ರೇಮ ಸಂಬಂಧ ಅಥವಾ ಅಂತಹ ಸಂಬಂಧ ಇರಲಿಲ್ಲ ಎಂದು ಯುವತಿ ಪೊಲೀಸರಿಗೆ ಹೇಳಿದ್ದಾಳೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಉತ್ತರ ಪ್ರದೇಶದಲ್ಲಿರುವ ಕುಟುಂಬದವರಿಗೆ ಘಟನೆಯ ಮಾಹಿತಿ ನೀಡಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.( ಏಜೇನ್ಸಿಸ್​)