ಈ ಪ್ರಕರಣವು ಭಾರತದಲ್ಲಿ ನಾಗರಿಕ ಹಕ್ಕುಗಳು ಮತ್ತು ರಾಷ್ಟ್ರೀಯ ಭದ್ರತೆಯ ನಡುವಿನ ಸಂಘರ್ಷಕ್ಕೆ ದೊಡ್ಡ ಉದಾಹರಣೆಯಾಗಿ ಮಾರ್ಪಟ್ಟಿದೆ. ಮಾನವ ಹಕ್ಕುಗಳ ಪರ ಹೋರಾಟಗಾರರು ಖಾಲಿದ್‌ನನ್ನು ರಾಜಕೀಯ ಕೈದಿ ಎಂದು ಕರೆದರೆ, ಸರ್ಕಾರವು ದೇಶವಿರೋಧಿ ಸಂಚಿನ ಆರೋಪಿ ಎಂದು ವಾದಿಸುತ್ತಿದೆ. ಸುಪ್ರೀಂ ಕೋರ್ಟ್‌ನ ಇಂದಿನ ನಿರ್ಧಾರವು ಯುಎಪಿಎ ಕಾಯ್ದೆಯ ಅಡಿಯಲ್ಲಿ ಜಾಮೀನು ಪಡೆಯುವುದು ಎಷ್ಟು ಕಠಿಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ,(ಏಜೆನ್ಸೀಸ್).