ಜೀವದ ಹಂಗು ತೊರೆದು ಯುವಕನ ಪ್ರಾಣ ಉಳಿಸಿದ ದೆಹಲಿ ಪೊಲೀಸ್ ಅಧಿಕಾರಿ ಅನಿಲ್ ಶರ್ಮಾ! Anil Sharma

 Anil Sharma (ಚಿತ್ರ X)
Anil Sharma (ಚಿತ್ರ X)
Published on
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಹಿಪಾಲಪುರ ಫ್ಲೈಓವರ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಸಮಯಪ್ರಜ್ಞೆ ಮೆರೆದು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (SI) ಅವರ ಸಾಹಸ ಮತ್ತು ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಘಟನೆಯ ಹಿನ್ನೆಲೆ

ದೆಹಲಿಯ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ಮಹಿಪಾಲಪುರ ಫ್ಲೈಓವರ್ ಮೇಲೆ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಓಡಾಡುತ್ತಾ, ಫ್ಲೈಓವರ್‌ನ ತಡೆಗೋಡೆಯ ಅಂಚಿನಲ್ಲಿ ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಆತ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಖಚಿತವಾಗುತ್ತಿದ್ದಂತೆ, ಅಲ್ಲಿದ್ದ ಸಾರ್ವಜನಿಕರು ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಎಸ್​ಐ ಅನಿಲ್​ ಶರ್ಮಾ ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ಣಯಿಸಲು ಆ ವ್ಯಕ್ತಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿದರು. ಭಯಭೀತರಾದ ವ್ಯಕ್ತಿಯನ್ನು ಶಾಂತಗೊಳಿಸಲು ಶರ್ಮಾ ಒತ್ತಾಯಿಸಿಲು ಆರಂಭಿಸಿದರು.

ವೈರಲ್ ವಿಡಿಯೋದಲ್ಲೇನಿದೆ?

ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಶರ್ಮಾ ಆ ವ್ಯಕ್ತಿಗೆ ನೀರು ನೀಡಿ ಮಾತನಾಡುತ್ತಲೇ ಇರುವುದನ್ನು ಕಾಣಬಹುದಾಗಿದೆ. ಆದಾಗ್ಯೂ, ಪೊಲೀಸ್​ ಒಳಬರುವ ನೆಪದಲ್ಲಿ ತನ್ನ ಮೊಬೈಲ್​ ಫೋನ್​ನ್ನು ಅವನಿಗೆ ನೀಡಲು ನೀಡಿದ್ದಾರೆ. ಆತ ಕೈ ಚಾಚುತ್ತಿದ್ದಂತೆಯೇ ಅಧಿಕಾರಿ ಮುಂದಕ್ಕೆ ಧಾವಿಸಿ ಅವನನ್ನು ಹಿಡಿದು ಅಂಚಿನಿಂದ ಸುರಕ್ಷತ ರಸ್ತೆಗೆ ಎಳೆದಿರುವುದನ್ನು ತೋರಿಸಲಾಗಿದೆ.
ದೆಹಲಿ ಪೊಲೀಸರ ಅಧಿಕೃತ ಹೇಳಿಕೆ ಮತ್ತು ಪ್ರಶಂಸೆ
ಈ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಎಸ್‌ಐ ಅವರ ಕಾರ್ಯವನ್ನು ಶ್ಲಾಘಿಸಿದೆ. "ತಮ್ಮ ಒಳನೋಟ, ತಾಳ್ಮೆ ಮತ್ತು ಧೈರ್ಯವನ್ನು ಪ್ರದರ್ಶಿಸುವ ಮೂಲಕ, ದೆಹಲಿ ಪೊಲೀಸ್ ಎಸ್‌ಐ ಅನಿಲ್ ಶರ್ಮಾ ಅವರು ಮಹಿಪಾಲ್‌ಪುರ ಫ್ಲೈಓವರ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವವನ್ನು ಉಳಿಸಿದರು" ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಎಸ್​ಐ ಶರ್ಮಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾನವೀಯತೆ ಮತ್ತು ಕರ್ತವ್ಯ ಒಟ್ಟಿಗೆ ನಡೆದಾಗ ಜೀವಗಳು ಉಳಿಯುತ್ತವೆ. ಎಸ್‌ಐ ಅನಿಲ್ ಶರ್ಮಾ ಅವರ ಚುರುಕಾದ ಬುದ್ಧಿ ಮತ್ತು ಸೂಕ್ಷ್ಮತೆಗೆ ನಮನಗಳು ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬ ಬಳಕೆದಾರ ಈ ಪೊಲೀಸ್ ಅಧಿಕಾರಿ ಅಪರಿಚಿತರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟರು, ಅತ್ಯಂತ ಶ್ಲಾಘನೀಯ ಕಾರ್ಯವನ್ನು ಮಾಡಿದ್ದಾರೆ. ಇಲಾಖೆ ಅವರನ್ನು ನೋಡಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net