ದೆಹಲಿಯ ಮಾಲಿನ್ಯಕ್ಕೆ ಕೇಜ್ರಿವಾಲ್ ಅವರೇ ಕಾರಣ ಎಂದು ನೇರವಾಗಿಯೇ ಟೀಕಿಸಿರುವ ಸಕ್ಸೇನಾ, ಕಳೆದ 11 ವರ್ಷಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಏನಾದರೂ ಮಾಡಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ, ನೀವು ಮುಖ್ಯಮಂತ್ರಿಯಾಗಿದ್ದಾಗ ನಾನು ನಿಮ್ಮೊಂದಿಗೆ ಮಾಲಿನ್ಯದ ಬಗ್ಗೆ ಮಾತನಾಡಿದರೆ, ಇದು 15-20 ದಿನಗಳ ಗದ್ದಲ, ಅದರ ಬಳಿಕ ಮಾಧ್ಯಮಗಳಾಗಲಿ, ಎನ್ಜಿಒಗಳಾಗಿ ಇದನ್ನು ಮರೆತುಬಿಡುತ್ತವೆ ಎಂದು ಹೇಳುತ್ತಿದ್ದಿರಿ ಎಂದು ಉಲ್ಲೇಸಿದ್ದಾರೆ.