ನವ ದೆಹಲಿ: ಸಫ್ದರ್ಜಂಗ್ ಪ್ರದೇಶದಲ್ಲಿ 30 ವರ್ಷದ ನ್ಯಾಯಾಧೀಶರ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರ ಕುಟುಂಬಸ್ಥರು ಅವರ ಪತ್ನಿ ಮತ್ತು ಅತ್ತಿಗೆ ವಿರುದ್ಧ ಆರೋಪಿಸಿದ್ದು, ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ, ಜೊತೆಗೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.