ಮೆಟಾ ಪರ ವಕೀಲ ಅರವಿಂದ್ ದಾತಾರ್, ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್ ಪತ್ತೆಹಚ್ಚಿ ತೆಗೆದುಹಾಕಲು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಲವು ಕ್ರಮಗಳಿವೆ ಎಂದು ಕೋರ್ಟ್ಗೆ ತಿಳಿಸಿದರು. ಇನ್ನೊಂದೆಡೆ, ಫೇಸ್ಬುಕ್ನಲ್ಲಿ ಇಂತಹ ಕಂಟೆಂಟ್ ಪತ್ತೆಹಚ್ಚುವ ಪ್ರಮಾಣ ಶೇ.99.5ರಷ್ಟು, ಇನ್ಸ್ಟಾಗ್ರಾಮ್ನಲ್ಲಿ ಶೇ.95.2ರಷ್ಟು ಇದೆ. ಮೆಟಾ ಇನ್ನಷ್ಟು ಬಲವಾದ ತಂತ್ರಜ್ಞಾನ ಮತ್ತು ಆಡಿಟ್ ವ್ಯವಸ್ಥೆ ಜಾರಿಗೆ ತರಲಿ ಎಂದು ಅರ್ಜಿದಾರರು ಕೋರಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರವೇ ಸಂಬಂಧಪಟ್ಟವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ,(ಏಜೇನ್ಸೀಸ್).