ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರಿದ ಮಾಲಿನ್ಯದ ಅಬ್ಬರ; ಕಾರ್ಮಿಕರ ನೆರವಿಗೆ ಧಾವಿಸಿದ ದೆಹಲಿ ಸರ್ಕಾರ Delhi govt

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, (Delhi govt) ಸ್ಥಳೀಯ ಸರ್ಕಾರ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಮತ್ತು ತೊಂದರೆ ಅನುಭವಿಸುತ್ತಿರುವ ಕಾರ್ಮಿಕರಿಗೆ ನೆರವಿನ ಹಸ್ತ ಚಾಚುವ ಸಲುವಾಗಿ 2 ಪ್ರಮುಖ ಕ್ರಮಗಳನ್ನು ಜಾರಿಗೊಳಿಸಿದೆ.
ಮೊದಲನೆಯದಾಗಿ, ನಿರ್ಮಾಣ ಚಟುವಟಿಕೆಗಳ ಸ್ಥಗಿತದಿಂದಾಗಿ ಜೀವನೋಪಾಯಕ್ಕೆ ನಡೆಸಲು ತೊಂದರೆಯಾಗಿರುವ ಎಲ್ಲಾ ಕಾರ್ಮಿಕರಿಗೂ ನೇರ ಆರ್ಥಿಕ ನೆರವನ್ನು ಕಲ್ಪಿಸುತ್ತಿದೆ. ನೇರ ವರ್ಗಾವಣೆಯ ಮೂಲಕ ಪ್ರತಿಯೊಬ್ಬ ಕಾರ್ಮಿಕರಿಗೆ 10,000 ರೂ.ಗಳನ್ನು ಅವರ ಬ್ಯಾಂಕ್​ ಖಾತೆಗೆ ವರ್ಗಾಹಿಸಲಾಗುವುದು ಎಂದು ತಿಳಿಸಿದ್ದಾರೆ.
ಎರಡನೆಯದಾಗಿ, ದೆಹಲಿಯಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ. 50 ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಇದು ವಾಹನದಿಂದ ಹೊರಸೂಸುವ ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಅಪಾಯಕಾರಿ ಗಾಳಿಯ ಗುಣಮಟ್ಟವನ್ನು ಸಾರ್ವಜನಿಕರು ಒಡ್ಡಿಕೊಳ್ಳದಂತೆ ತಡೆಯುವ ಉದ್ದೇಶವಾಗಿದೆ. ಆದಾಗ್ಯೂ, ಆರೋಗ್ಯ ಸೇವೆ ಮತ್ತು ಇತರ ನಿರ್ಣಾಯಕ ವಲಯಗಳಂತಹ ಅಗತ್ಯ ಸೇವೆಗಳನ್ನು ಈ ನಿರ್ದೇಶನದಿಂದ ವಿನಾಯಿತಿ ನೀಡಲಾಗಿದೆ.
ಕಚೇರಿಗಳಲ್ಲಿ ಸಿಬ್ಬಂದಿಗಳಿಗೆ ಕೆಲಸದ ಸಮಯವನ್ನು ಜಾರಿಗೆ ತರುವಂತೆ ನಿರ್ದೇಶನ ನೀಡಲಾಗಿದೆ. ಹಾಗೆಯೇ ಜೈಲುಗಳು, ಆರೋಗ್ಯ ಸೇವೆಗಳು, ಸಾರ್ವಜನಿಕ ಸಾರಿಗೆ, ವಿದ್ಯುತ್ ಮತ್ತು ಇತರ ನಿರ್ಣಾಯಕ ಇಲಾಖೆಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಈ ನಿರ್ಬಂಧಗಳಿಂದ ವಿನಾಯಿತಿ ನೀಡಿದೆ.
ವಿಷಕಾರಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿಯಲ್ಲಿ ನಿರ್ಬಂಧಗಳ ಹೇರಿಕೆ!
ಈ ಎಲ್ಲಾ ಸರ್ಕಾರದ ನಿರ್ಧಾರಗಳು ಮಾಲಿನ್ಯವನ್ನು ನಿಗ್ರಹಿಸುವ ಜೊತೆಗೆ ದುರ್ಬಲ ವರ್ಗದ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ದೆಹಲಿ ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ. ಮೊದಲು ದೆಹಲಿಯು GRAP ಹಂತ 3 ನಿರ್ಬಂಧಗಳಲ್ಲಿದ್ದಾಗ ನಿರ್ಮಾಣ ಚಟುವಟಿಕೆಯನ್ನು 16 ದಿನಗಳವರೆಗೆ ಸ್ಥಗಿತಗೊಳಿಸಲಾಯಿತು. ನಿರ್ಬಂಧಗಳನ್ನು ತೆಗೆದು ಹಾಕಿದ ನಂತರ GRAP ಹಂತ 4 ಕ್ಕೆ ಸಂಬಂಧಿಸಿದ ಪರಿಹಾರವನ್ನು ನಿರ್ಣಯಿಸಲಾಗುತ್ತದೆ.
ನೋಂದಣಿ ಪೋರ್ಟಲ್ ಇದೀಗ ತೆರೆದಿದ್ದು, ಹೆಚ್ಚಿನ ನಿರ್ಮಾಣ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು ಮತ್ತು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ (ಡಿ. 17) ಬೆಳಿಗ್ಗೆ ದೆಹಲಿಯ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಣೆ ಕಂಡಿದ್ದು, ವಾಯು ಗುಣಮಟ್ಟ ಸೂಚ್ಯಂಕ 328 ಕ್ಕೆ ದಾಖಲಾಗಿದೆ. ಆದಾಗ್ಯೂ, ಇನ್ನೂ 'ತುಂಬಾ ಕಳಪೆ' ವರ್ಗದಲ್ಲೇ ಉಳಿದಿದೆ. ನಗರದ ದೊಡ್ಡ ಭಾಗಗಳು ದಟ್ಟವಾದ ಹೊಗೆಯಿಂದ ಕೂಡಿದ್ದು, ಬೆಳಗಿನ ಜಾವದಲ್ಲಿ ಗೋಚರತೆ ಕಡಿಮೆಯಾಗಿದೆ.
ದೆಹಲಿಯ ವಾಯುಗುಣಮಟ್ಟದ ಸೂಚಾಂಕ್ಯದಲ್ಲಿ 0 ರಿಂದ 50 ರವರೆಗಿನ AQI ಓದುವಿಕೆಯನ್ನು 'ಉತ್ತಮ' ಎಂದು ವರ್ಗೀಕರಿಸಲಾಗಿದೆ, 51 ರಿಂದ 100 'ತೃಪ್ತಿದಾಯಕ', 101 ರಿಂದ 200 'ಮಧ್ಯಮ', 201 ರಿಂದ 300 'ಕಳಪೆ', 301 ರಿಂದ 400 'ತುಂಬಾ ಕಳಪೆ' ಮತ್ತು 401 ರಿಂದ 500 'ಗಂಭೀರ' ಎಂದು ವರ್ಗೀಕರಿಸಲಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net